ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: Riding ಬೈಕ್‌ ನಲ್ಲಿ ನಾಗರಹಾವು ದರ್ಶನ!; ಸವಾರ ಹೈರಾಣ, ನೆರವಿಗೆ ಮೊರೆ

ದೇವನಹಳ್ಳಿ: ಹಾಗೇ ಓಡಿಸ್ತಾ ಇದ್ದ ಬೈಕ್‌ ನಲ್ಲಿ‌ ಇದ್ದಕ್ಕಿದ್ದಂತೆಯೇ ನಾಗರಹಾವು ಕಂಡು ಪ್ರಾಣ ಭಯದಿಂದ ಬೊಬ್ಬಿರಿದಿದ್ದಾನೆ ಆ ಬೈಕ್ ಸವಾರ! ಬಳಿಕ ಅದ್ಯಾಗೋ ಸಾವಧಾನದಿಂದ ದೇವನಹಳ್ಳಿ ಶಿರಡಿ ಆಸ್ಪತ್ರೆ ಬಳಿ ಬೈಕನ್ನು ಸೈಡ್‌ ಗೆ ನಿಲ್ಲಿಸಿ, ಸಾರ್ವಜನಿಕರ ‌ಸಹಾಯ ಬೇಡಿದ್ದಾನೆ. ಯುವಕನ ಚೀರಾಟ ಕೇಳಿ ಅಕ್ಕಪಕ್ಕದಲ್ಲಿದ್ದ ಜನರು ಧಾವಿಸಿ ಯುವಕನಿಗೆ ಧೈರ್ಯ ತುಂಬಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಬೈಕ್ ರಿಪೇರಿದಾರ, ಬೈಕ್ ಪಾರ್ಟ್ಸ್‌ ಬಿಚ್ಚಿ ಹಾವಿಗಾಗಿ‌ ಹುಡುಕಾಟ ನಡೆಸಿದರು. ಕೊನೆಗೆ ಬೈಕ್ ನ ಪೆಟ್ರೋಲ್ ಟ್ಯಾಂಕ್ ಕೆಳಗೆ ಹಾವು ಅವಿತಿರುವುದು ಕಣ್ಣಿಗೆ ಬಿತ್ತು. ಆದರೂ ಅಲ್ಲಿಂದ ನಾಗರನನ್ನು ತೆರವುಗೊಳಿಸಲು ಕನಿಷ್ಠ

ಒಂದು ಗಂಟೆಯೇ ಹಿಡಿಯಿತು. ಹೇಗೂ ಹರಸಾಹಸ ಪಟ್ಟು "ಪ್ರಯಾಣ ಪ್ರಿಯ" ಉರಗವನ್ನು ಹೊರತೆಗೆಯಲಾಯಿತು.

ಏನಪ್ಪಾ ಹೀಗಾಗೋಯ್ತು ಅಂತ ಬೈಕ್ ಸವಾರ ಕಡೆಗೂ ನಿಟ್ಟುಸಿರು ಬಿಡುತ್ತಿದ್ದರೆ, ಸುತ್ತಲೂ ಸೇರಿದ್ದ ಜನರು, ಪಟ್ರೋಲ್ ಟ್ಯಾಂಕ್ ಕೆಳಗೆ ಪವಡಿಸಿದ್ದ ನಾಗರ ಹಾವಿನ ಹಾವಭಾವವನ್ನು ತಮ್ಮ ಮೊಬೈಲ್ ಗಳಿಂದ ಶೂಟ್ ಮಾಡುವುದರಲ್ಲಿ ನಿರತರಾಗಿದ್ದರು.

ಅಂತೂ ಇಂತೂ ಒಂದು ಗಂಟೆ ಕಾಲ‌ ಕಾಯಿಸಿ, ಸತಾಯಿಸಿದ ನಂತರವೇ ನಾಗರಹಾವು ದರ್ಶನ ಕೊಟ್ಟಿತು ನೋಡಿ.

Edited By : Shivu K
Kshetra Samachara

Kshetra Samachara

24/04/2022 09:53 am

Cinque Terre

3.27 K

Cinque Terre

0

ಸಂಬಂಧಿತ ಸುದ್ದಿ