ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದ ರೈಲ್ವೇ ಗಾಲಿ ಕಾರ್ಖಾನೆಯಲ್ಲಿ ಚಿರತೆ ಪ್ರತ್ಯಕ್ಷ

ಯಲಹಂಕ: ದಕ್ಷಿಣ ಪಿನಾಕಿನಿ ನದಿ ಪಾತ್ರದ ಯಲಹಂಕ ಕೆರೆಗೆ ಹೊಂದಿಕೊಂಡ ಯಲಹಂಕದ ರೈಲ್ವೇ ಗಾಲಿ ಮತ್ತು ಅಚ್ಚು ಕಾರ್ಖಾನೆಯ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ.

ರೈಲ್ವೇ ಅಚ್ಚು ಮತ್ತು ಗಾಲಿ ಕಾರ್ಖಾನೆಯ ಕಾಂಪೌಂಡ್ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿರತೆ ಕಂಡು ಕಾರ್ಖಾನೆಯ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಯಲಹಂಕ ವಲಯ ಅರಣ್ಯ‌ ಇಲಾಖೆ ಐವರು ಸಿಬ್ಬಂದಿ ಪ್ರತ್ಯಕ್ಷವಾಗಿರುವ ಚಿರತೆ ಹಿಡಿಯಲು ಬೋನಿಟ್ಟು ಕಾರ್ಯಚರಣೆ ಮುಂದುವರೆಸಿದ್ದಾರೆ.

ಕಾರ್ಖಾನೆಯ ಒಳಗೆ ಯಾವುದೇ ಸಿಬ್ಬಂದಿಯನ್ನು ಬಿಡದೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆರ್‌ಪಿಎಫ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಜೀವಂತವಾಗಿ ಹಿಡಿಯಲು ಸೂಕ್ತ ಸ್ಥಳಗಳಲ್ಲಿ ಬೋನುಗಳನ್ನು ಇಡಲಾಗಿದೆ. ಇಂದು ಸಹ ಅರಣ್ಯ ಮತ್ತು ಆರ್‌ಪಿಎಫ್ ಸಿಬ್ಬಂದಿ ಸಿಸಿಟಿವಿ ದೃಶ್ಯ ಆಧರಿಸಿ ಚಲನವಲನ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ.

ಸಿಂಗನಾಯಕನಹಳ್ಳಿ ಕೆರೆ ಹಾಗು ಯಲಹಂಕ ಕೆರೆ ಕೋಡಿಗಳ ಮೂಲಕ ಚಿರತೆ ರೈಲ್ವೇ ಗಾಲಿ ಕಾರ್ಖಾನೆಗೆ ಬಂದಿರಬಹುದು ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಅಂತು ನಗರಕ್ಕೆ ಚಿರತೆ ಆಗಮಿಸಿದ ಹಿನ್ನಲೆ‌ ಯಲಹಂಕ ಜನ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದಾರೆ.

ಸುರೇಶ್ ಬಾಬು Public Next ಯಲಹಂಕ..

Edited By : Vijay Kumar
Kshetra Samachara

Kshetra Samachara

27/03/2022 08:01 pm

Cinque Terre

3.59 K

Cinque Terre

0

ಸಂಬಂಧಿತ ಸುದ್ದಿ