ಯಲಹಂಕ ಏರ್ ಪೋರ್ಟ್ ಗೆ ಹೊಂದಿಕೊಂಡ ಹುಣಸಮಾರನಹಳ್ಳಿ ಕೆರೆ ರಾತ್ರಿಯ ಭಾರೀ ಮಳೆಗೆ ತುಂಬಿ ಹರಿದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿ ಏರ್ ಪೋರ್ಟ್ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ಜೊತೆಗೆ ಪ್ರಭಾವಿ ವ್ಯಕ್ತಿಗಳು ರಾಜಕಾಲುವೆ ಒತ್ತುವರಿ ಮಾಡಿರೋ ಪರಿಣಾಮ ನೀರು ಕೆರೆಗೆ ಹರಿಯದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ತುಂಬಾ ಸಮಸ್ಯೆ ಎದುರಿಸುವಂತಾಗಿದೆ.
ಕೆರೆ ನೀರು ಮತ್ತು ಮಳೆ ನೀರು ರಸ್ತೆಗೆ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಅಡಿ ನೀರು ನಿಂತಿದೆ. ರಾಜಕಾಲುವೆ ಮುಚ್ವಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಆದ್ದರಿಂದ ವಾಹನ ಸವಾರರು ಪರದಾಡಿದ್ದಾರೆ. ಏರ್ ಪೋರ್ಟ್ ಕಡೆಯಿಂದ ಬೆಂಗಳೂರು ನಗರಕ್ಕೆ ತೆರಳುವ ಹುಣಸಮಾರನಹಳ್ಳಿ ಬಳಿ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಏರ್ ಪೋರ್ಟ್ ಗೆ ಸಂಚರಿಸುವ ಪ್ರಯಾಣಿಕರು ರಸ್ತೆಯಲ್ಲೇ ನಿಂತು ಹೈರಾಣಾಗಿದ್ದಾರೆ..ರಾಜಕಾಲುವೆ ಒತ್ತುವರಿದಾರರು ಅಕ್ರಮ ಲೇಔಟ್ ಗಳನ್ನು ನಿರ್ಮಿಸಿರುವುದೇ ಸಮಸ್ಯೆಗೆ ಕಾರಣ ಎಂದು ಸಾರ್ವಜನಿಕರು ಜನಪ್ರತಿನಿಧಿಗಳ ಬಗ್ಗೆ ಆಕ್ರೋಶಗೊಂಡಿದ್ದಾರೆ..
PublicNext
18/05/2022 12:02 pm