ಹೊಸಕೋಟೆ : ಕಳೆದರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗಣಗಲೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ತಮಿಳುನಾಡು ಗಡಿ ಭಾಗದ ಹತ್ತಾರು ಗ್ರಾಮಗಳ ಕೆರೆಗಳು ತುಂಬಿ ಹರಿದಿವೆ. ಗಣಗಲೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ , ಬಾಗೂರು, ಗುಂಡೂರು, ಮಾರನಗೆರೆ, ಸಿದ್ಧನಪುರ ಕೆರೆಗಳು ಕೋಡಿ ಹರಿದಿದೆ.
ಕಳೆದ ಎರಡು ಮೂರು ವರ್ಷಗಳಿಂದ ಈ ಭಾಗದಲ್ಲಿ ಮಳೆ ಚನ್ನಾಗಿಯೇ ಆಗಿತ್ತು. ಕೆರೆಗಳಲ್ಲಿ ಸ್ವಲ್ಪ ನೀರಿತ್ತು. ಈ ವರ್ಷದ ಮಳೆ ಪ್ರಾರಂಭದಿಂದಲೂ ಉತ್ತಮ ಮಳೆಯಾಗ್ತಿದೆ. ಕೆರೆಗಳು ತುಂಬಿವೆ ಇದಕ್ಕೆ ಪೂರಕವಾಗಿ ರಾತ್ರಿ ಸುರಿದ ಭಾರಿ ಮಳೆಗೆ ಈ ಭಾಗದ ಎಲ್ಲಾ ಕೆರೆಗಳು ಕೋಡಿ ಬಿದ್ದಿವೆ. ರೈತರು ಮತ್ತು ಗ್ರಾಮಸ್ಥರು ಒಳ್ಳೆ ಮಳೆಯಿಂದ ಖುಷಿಯಾಗಿದ್ದಾರೆ.
ಕೆರೆಗಳು ತುಂಬಿದರೆ ಬೋರ್ವೆಲ್‌ಗಳಲ್ಲಿ ನೀರು ಹೆಚ್ಚಾಗಿ ರೈತರು ಹರ್ಷಗೊಂಡಿದ್ದಾರೆ. ಮಳೆ ಹೆಚ್ಚಾಗಿ ಕೆಲವು ಬೆಳೆಗೆ ತೊಂದರೆಯಾಗಿದೆ ಎನ್ನುವುದನ್ನು ಬಿಟ್ಟರೆ, ಮಳೆ ಈ ಹೊಸಕೋಟೆ ಗಡಿ ಭಾಗದಲ್ಲಿ ಹರ್ಷೋದ್ಘಾರ ಮೂಡಿಸಿದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..
PublicNext
26/08/2022 03:38 pm