ಬೆಂ.ಗ್ರಾಮಾಂತರ : ಕಾಡಿನಲ್ಲಿ ನೀರು ಹಾಗೂ ಆಹಾರ ಸಿಗದೇ ನಾಡಿಗೆ ಬಂದ ನವಿಲನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಭುವನಹಳ್ಳಿಯ ಗ್ರಾಮಸ್ಥರು ನೀರು ಕುಡಿಸಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.. ತೀವ್ರವಾದ ಬೇಸಿಗೆಯಿಂದ ಕಾಡಿನಲ್ಲಿ ನೀರು ಆಹಾರ ದೊರೆಯದೇ ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿವೆ.. ನವಿಲು ಬಿಸಿಲು ತಾಳಲಾರದೇ ಭವನಹಳ್ಳಿ ಸಮೀಪದ ರೈತರೊಬ್ಬರ ಹೊಲದಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರಾದ ಮನೋಜ್ ಮತ್ತು ನರೇಂದ್ರ ಬಾಬು ಎಂಬುವವರು ಅದಕ್ಕೆ ನೀರು ಕುಡಿಸಿದ ನಂತರ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ...
Kshetra Samachara
11/04/2022 06:34 pm