ಕೊರೊನಾ ಎಂಟ್ರಿ ಆಗುತ್ತಿದ್ದಂತೆಯೇ ಅದೆಷ್ಟೋ ಪ್ರವಾಸಿ ತಾಣಗಳಿಗೆ ಬೀಗ ಬಿದ್ದಿತ್ತು. ಅದರಲ್ಲಿ ಈ ಮಡಿವಾಳ ಕೆರೆ ಕೂಡ ಒಂದಾಗಿತ್ತು. ಇಲ್ಲಿಗೆ ಪ್ರತಿದಿನ ನೂರಾರು ಪ್ರವಾಸಿಗಳು ಬರುತ್ತಿದ್ದರು. ಆದರೆ ಭಾರತಕ್ಕೆ ಎಂಟ್ರಿ ನೀಡಿದ ಕೊರೊನಾದಿಂದ ಕೆರೆ ಮುಚ್ಚಲಾಗಿತ್ತು. ಈಗ ಎರಡು ವರ್ಷಗಳ ನಂತರ ಮತ್ತೆ ಮಡಿವಾಳ ಕೆರೆ ಪ್ರವಾಸಿಗಳಿಗೆ ತೆರೆದಿದೆ. ಜೂನ್ ಒಂದನೇ ತಾರೀಕಿನಿಂದ ಪ್ರವಾಸಿಗಳಿಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಾರ್ಕ್ ತೆರೆಯಲಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಯು ಪಾರ್ಕ್‌ನ ಸ್ವಚ್ಛತೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಡಿವಾಳ ಕೆರೆಯ ಪಾರ್ಕ್‌ನಲ್ಲಿ ಮಕ್ಕಳಿಗೆ ಆಟವಾಡಲು ಮಕ್ಕಳ ಪ್ಲೇ ಏರಿಯಾ ಕೂಡ ಈಗ ಓಪನ್ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಮಡಿವಾಳ ಕೆರೆಯಲ್ಲಿ ಬೋಟಿಂಗ್ ಕೂಡ ಪ್ರಾರಂಭ ಮಾಡಲಾಗುವುದು.
ಮಡಿವಾಳ ಕೆರೆಯಿಂದ ನಮ್ಮ ಪ್ರತಿನಿಧಿ ನವೀನ ನೀಡಿರುವಂತಹ ಪ್ರತ್ಯಕ್ಷ ವರದಿ ಇಲ್ಲಿದೆ.
Kshetra Samachara
02/06/2022 06:35 pm