ಮಹದೇವಪುರ : ಭಾರತದ ಭವಿಷ್ಯದ ಮತ್ತು ಭರವಸೆಯ E2W ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಒಬೆನ್ ಎಲೆಕ್ಟ್ರಿಕ್ ಸಂಸ್ಥೆಯು ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್- `ರೋರ್' ಅನ್ನು ಇಂದು ಬೆಂಗಳೂರಿನಲ್ಲಿ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸಿಒಒ ದಿನಕರ್ ಅಗರವಾಲ್ ಅನಾವರಣಗೊಳಿಸಿದರು.
ಒಬೆನ್ ಸಂಸ್ಥೆಯು ಕಾರ್ಯಕ್ಷಮತೆ, ವಿಶ್ವಾಸಾರ್ಹತೆ, ಸೊಗಸಾದ ವಿನ್ಯಾಸ, ಶೈಲಿ, ಗುಣಮಟ್ಟ ಮತ್ತು ಚುರುಕುತನದಂತಹ ಉನ್ನತ ಅಂಶಗಳನ್ನು ಗಮನದಲ್ಲಿಟ್ಟುಕೊಂಡು `ರೋರ್' ಅನ್ನು ಅಭಿವೃದ್ಧಿಪಡಿಸಿದೆ..ಮೇಡ್-ಇನ್-ಇಂಡಿಯಾ ಆಗಿರುವ `ರೋರ್' ಅನ್ನು ಇವಿ ಕ್ಷೇತ್ರದಲ್ಲಿ ಅನುಭವಿ ವೃತ್ತಿಪರರು ಸಂಪೂರ್ಣವಾಗಿ ಸಾಂಸ್ಥಿಕವಾಗಿಯೇ ವಿನ್ಯಾಸಗೊಳಿಸಿದ್ದಾರೆ. `ರೋರ್'ಗಾಗಿ ಆನ್‌ಲೈನ್‌ನಲ್ಲಿ ಮುಂಗಡ ಬುಕಿಂಗ್ ಇಂದು ಪ್ರಾರಂಭವಾಗಿದೆ.. ಭಾರತೀಯ ಸವಾರರಿಗೆ ಅಮೋಘವಾದ ನವೀನ ವಿನ್ಯಾಸವನ್ನು, ಪ್ರಾಯೋಗಿಕತೆ ಮತ್ತು ಕಾರ್ಯಕ್ಷಮತೆ-ಆಧಾರಿತ ಸವಾರಿ ಅನುಭವವನ್ನೂ ಈ `ರೋರ್' ನೀಡುತ್ತದೆ.
Kshetra Samachara
21/03/2022 04:48 pm