ಬೆಂಗಳೂರು:ಲೋಕಾಯುಕ್ತಕ್ಕೆ ಅಧಿಕೃತವಾಗಿ ಮತ್ತೆ ಅಧಿಕಾರ ಬಂದ ನಂತರ, ಲೋಕಾಯುಕ್ತಕ್ಕೆ ಎಸಿಬಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಅಧಿಕಾರಿ ವರ್ಗ ಹಾಗೂ ಪೊಲೀಸರ ಜೊತೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಸಲಿದ್ದಾರೆ.
ಪಾರದರ್ಶಕ ಸದೃಢ ಸಂಸ್ಥೆಯ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗಿರುವ ಲೋಕಾಯುಕ್ತರು ಭ್ರಷ್ಟರಹಿತ ಕಾರ್ಯನಿರ್ವಹಣೆಗಾಗಿ ಸೋಮವಾರ ಅಧಿಕಾರಿಗಳು ಜೊತೆ ಸಭೆ ನಡೆಸಲಿದ್ದಾರೆ.
ಈಗಾಗಲೇ ಎಸಿಬಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರುವ ಲೋಕಾಯುಕ್ತ ಕಾರ್ಯದರ್ಶಿ ಸದ್ಯ ಕೇಸ್ ಫೈಲ್ ಗಳಷ್ಟೇ ವರ್ಗಾವಣೆ ಮಾಡಿಕೊಳ್ಳಲು ಸಿದ್ದತೆ ನಡೆಸಲಾಗುತ್ತಿದೆ.ಎಸಿಬಿ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಎಲ್ಲಾ ಎಸಿಬಿ ಎಸ್ಪಿಗಳಿಗೆ ಪತ್ರ ಬರೆದಿದ್ದುಸರ್ಕಾರದ ಆದೇಶದ ಬೆನ್ನಲ್ಲೇ ಎಲ್ಲಾ ಪ್ರಕರಣಗಳನ್ನ ವರ್ಗಾವಣೆ ಮಾಡಲು ಸೂಚಿಸಿದ್ದಾರೆ.
ಬೆಂಗಳೂರು ನಗರ ಲೋಕಾಯುಕ್ತ ಮುಖ್ಯ ಕಚೇರಿಗೆ ವರ್ಗಾವಣೆಯಾದರೆ ಉಳಿದ ಜಿಲ್ಲೆಗಳಲ್ಲಿ ಆಯಾ ಎಸಿಬಿ ಕಚೇರಿಯಿಂದ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆಯಾಗಲಿದೆ.
ನಾಳಿನ ಸಭೆ ಬಳಿಕ ಅಧಿಕಾರಿ ಸಿಬ್ಬಂದಿ ವರ್ಗ ನಿಯೋಜನೆ ಬಗ್ಗೆ ಸರ್ಕಾರದ ಜೊತೆ ಲೋಕಾಯುಕ್ತರು ಮಾಹಿತಿ ನೀಡಲಿದ್ದಾರೆ. ಗಂಭೀರ ಪ್ರಕರಣಗಳು ಮಾತ್ರ ಲೋಕಾಯುಕ್ತಕ್ಕೆ ಬಂದಿದ್ದು, ಆ ಪ್ರಕರಣಗಳ ತನಿಖೆ ಯಾವ ಯಾವ ತಂಡಗಳಿಗೆ ನೀಡಬೇಕು ಎಂಬುದು ಸಹ ಸಭೆಯಲ್ಲಿ ಚರ್ಚೆಯಾಗಲಿದೆ. ಮೊದಲು ಎಸಿಬಿ ಪ್ರಕರಣಗಳನ್ನೇ ಕೈಗೆತ್ತಿಕೊಂಡು ತನಿಖೆ ಮಾಡಲು ಲೋಕಾಯುಕ್ತ ಸಿದ್ದತೆ ನಡೆಸುತ್ತಿದೆ. ತನಿಖೆ ಮುಗಿಯುವ ಹಂತಕ್ಕೆ ಬಂದಿರುವ ಹಾಗೂ ಬಾಕಿಯಿರುವ ಕೇಸ್ ಗಳು ಮೊದಲು ತನಿಖೆ ಪೂರ್ಣಗೊಳಿಸುವ ಬಗ್ಗೆಯೂ ಚರ್ಚೆಯಾಗಲಿದೆ ಎನ್ನಲಾಗಿದೆ.
Kshetra Samachara
11/09/2022 08:31 pm