ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಕೋರ್ಟ್ ಆಗಾಗ ಚಾಟೀ ಬೀಸಿದ್ರು ಬಿಬಿಎಂಪಿ ಮಾತ್ರ ತಲೆಕೆಡಿಸಿಕೊಳ್ತಿಲ್ಲ. ಸದ್ಯ ಕೋರ್ಟ್ ಅಂಗಳಕ್ಕೆ ಗುಂಡಿ ವಿಚಾರ ಬಂದಿದ್ದು, ವಿಚಾರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆಯಾಗಿದೆ.
ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ನ ಹಂಗಾಮಿ ಸಿಜೆ ಅಲೋಕ್ ಅರಾಧೆ ಮತ್ತು ನ್ಯಾ.ಎಸ್ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ವಿಚಾರಣೆ ನಡೆಸಲಾಯ್ತು. ನಗರದ ರಸ್ತೆಗಳಲ್ಲಿ ಗುಂಡಿ ಗಟಾರಗಳೇ ತುಂಬಿವೆ ನ್ಯಾ. ವಿಶ್ವಜಿತ್ ಶೆಟ್ಟಿ ಹೇಳಿದ್ರೆ. ರಸ್ತೆಗಳಲ್ಲಿ ನೀರು ನಿಂತು ಜನರು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಅಹವಾಲು ಪರಿಹಾರ ಕೇಂದ್ರ ಆರಂಭಿಸಿದ್ದೀರಾ ನ್ಯಾಯಮೂರ್ತಿ ಪ್ರಶ್ನೆ ಮಾಡಿದ್ರು.ಭಾರಿ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿದ್ದು, ಬಿಬಿಎಂಪಿ ಅಧಿಕಾರಿಗಳು ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಉತ್ತರಿಸಿದ್ರು.
ಸದ್ಯ ಜನರ ಸಮಸ್ಯೆಯನ್ನು ಬಗೆಹರಿಸಲು ಹೈಕೋರ್ಟ್ ಸೂಚನೆ ನೀಡಿದ್ದು, ವಾರ್ಡ್ವಾರು ಅಹವಾಲು ಕೇಂದ್ರಗಳನ್ನು ಆರಂಭಿಸಲು ಬಿಬಿಎಂಪಿಗೆ ಪೀಠ ನಿರ್ದೇಶನ ನೀಡಿದೆ.ಅಹವಾಲು ಆಲಿಸಲು ರಚಿಸುವ ಸಮಿತಿಯಲ್ಲಿ ಎಂಜಿನಿಯರ್ಗಳು ಭಾಗಿಯಾಗಬೇಕು ಎಂದು ನಿರ್ದೇಶನ ನೀಡಿ ಹೈಕೋರ್ಟ್ ವಿಚಾರಣೆಯನ್ನ ಮುಂದೂಡಿದೆ.
Kshetra Samachara
07/09/2022 08:30 pm