ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ಆರಂಭಸಿದ್ದ ಪಾದಯಾತ್ರೆ ಮತ್ತೆ ಪುನರಾರಂಭವಾಗಿದೆ. ಇಂದು ಬೆಂಗಳೂರಿಗೆ ಕಾಂಗ್ರೆಸ್ ಪಾದಯಾತ್ರೆ ಆಗಮಿಸಲಿರುವ ಹಿನ್ನೆಲೆ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಈ ಬಂದೋಬಸ್ತ್ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ ಮಾಹಿತಿ ನೀಡಿದ್ದಾರೆ. ಇಂದು ಬೆಂಗಳೂರು ಹೊರವಲಯಕ್ಕೆ ಪಾದ ಯಾತ್ರೆ ಬಂದು ತಲುಪಲಿದೆ, ನಾಳೆ ನಾಡಿದ್ದು ಪಾದಯಾತ್ರೆ ಇರಲಿದೆ,ಹೀಗಾಗಿ ಬೆಂಗಳೂರು ಪೊಲೀಸರು ಸಂಪೂರ್ಣ ಭದ್ರತಾ ಸಿದ್ದತೆ ಮಾಡಿಕೊಂಡಿದ್ದಾರೆ.
ಅಲ್ಲದೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಇದೆ. ಈ ಹಿನ್ನೆಲೆ ಬೆಂಗಳೂರಿನ ಎಲ್ಲಾ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಆಯಾ ವಿಭಾಗದಲ್ಲಿ ಪಾದಯಾತ್ರೆ ಇರುವಾಗ ಆ ವಿಭಾಗದ ಡಿಸಿಪಿ ಭದ್ರತೆ ನೋಡಿಕೊಳ್ಳಲಿದ್ದಾರೆ ಅವರಿಗೆ ಉಳಿದ ವಿಭಾಗಗಳ ಪೊಲೀಸರು ಸಾಥ್ ನೀಡಲಿದ್ದಾರೆ.
ಭದ್ರತೆಗೆಗಾಗಿ 40 Ksrp 30 car ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಸಂಚಾರ ನಿರ್ವಹಣೆ ಬಗ್ಗೆ ಬೆಂಗಳೂರು ಪೊಲೀಸ್ ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಲಾಗುವುದು.ಸಾರ್ವಜನಿಕರು ಸಂಚಾರ ವ್ಯತ್ಯಯದ ಬಗ್ಗೆ ಗಮನಹರಿಸಬೇಕು ಎಂದು ಮಾಹಿತಿ ನೀಡಿದರು.
PublicNext
28/02/2022 08:32 pm