ವರದಿ: ಹರೀಶ್ ಗೌತಮನಂದ
ಆನೇಕಲ್: ಇತ್ತೀಚೆಗೆ ಕೇಂದ್ರ ಕಾರಾಗೃಹ ʼಪರಪ್ಪನ ಅಗ್ರಹಾರʼದಲ್ಲಿ ಕೈದಿಗಳಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಸರ್ಪ್ರೈಸ್ ವಿಸಿಟ್ ಮಾಡಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲ್ ನಲ್ಲಿ ಪೊಲೀಸರೂ ಕೈದಿಗಳ ಜೊತೆ ಶಾಮೀಲಾಗಿರುವ ಬಗ್ಗೆ ವೀಡಿಯೊ ಸಹ ಪ್ರಸಾರವಾಗಿತ್ತು. ಇದರಿಂದ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ವರ್ಚಸ್ಸಿಗೆ ಧಕ್ಕೆ ಉಂಟಾಗಿತ್ತು.
ಹೀಗಾಗಿ ನ್ಯಾಯಾಧೀಶರಾದ ವೀರಪ್ಪ ಮತ್ತು ದಿನೇಶ್ ಅವರು ಇದೀಗ ದಿಢೀರ್ ಭೇಟಿ ನೀಡಿದ್ದಾರೆ. ಇನ್ನು, ಇಡೀ ಜೈಲನ್ನೇ ಜಾಲಾಡಿ ಜೈಲಿನ ಮೂಲೆ ಮೂಲೆಗೂ ಭೇಟಿ ನೀಡಿದ್ದಾರೆ. ಅಡುಗೆ ಮನೆ, ಕ್ಯಾಂಟೀನ್, ಪ್ರತ್ಯೇಕ ಬ್ಯಾರಕ್, ವಿಚಾರಣಾಧೀನ ಕೈದಿಗಳು, ಸಜಾ ಬಂಧಿಗಳ ಜೊತೆಗೂ ಸಹ ಮಾತನಾಡಿದರು.
ಈ ನ್ಯಾಯಾಧೀಶರ ಭೇಟಿ ನಂತರವಾದರೂ ಕೇಂದ್ರ ಕಾರಾಗೃಹದ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬೀಳುತ್ತಾ? ಅನ್ನೋದನ್ನು ಕಾದು ನೋಡಬೇಕಾಗಿದೆ.
PublicNext
29/01/2022 09:45 pm