ಬೆಂಗಳೂರು:ವೀಕೆಂಡ್ ಕರ್ಫ್ಯೂ ಎಫೆಕ್ಟ್ ನಗರದ ಕೇಂದ್ರ ಬಸ್ ನಿಲ್ದಾಣಕ್ಕೂ ತಟ್ಟಿದೆ. ಮೊದಲೇ ತಿಳಿಸಿದಂತೆ ಇಂದು ಬಸ್ ಸಂಚಾರ ನಿಲ್ಲಿಸಿದ್ದ ಬಿಎಂಟಿಸಿ, ಕೆಎಸ್ ಆರ್ ಟಿಸಿ ಸ್ಟಾಂಡ್ ನಿಂದ ಹೊರಗೆ ಬಂದಿಲ್ಲ. ಆದ್ರೆ ಕೆಲವು ತುರ್ತು ಸೇವೆ ಹಿನ್ನೆಲೆ ಮಾತ್ರ ಕೆಲವೇ ಕೆಲವು ಬಸ್ ಮಾತ್ರ ರಸ್ತೆಗಿಳಿದಿವೆ. ಈ ಹಿನ್ನೆ ಮೆಜೆಸ್ಟಿಕ್ ನ ಕೆಂಪೇಗೌಡ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿತ್ತು. ಇತ್ತ ಬಸ್ ಇರುತ್ತೆ ಅಂತ ನಿಲ್ದಾಣಕ್ಕೆ ಬಂದಿದ್ದ ಕೆಲವು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗಿತ್ತು.
Kshetra Samachara
08/01/2022 11:44 am