ಬೆಂಗಳೂರು: ವೀಕೆಂಡ್ ಕರ್ಫ್ಯೂ ಇರೋದ್ರಿಂದ ಸದಾ ಜನರಿಂದ ಗಿಜುಗುಡಿತ್ತಿದ್ದ ಬಿವಿಕೆ ಅಯ್ಯಾಂಗಾರ್ ರಸ್ತೆ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದೆ. ಇಲ್ಲಿಯ ಅಂಡಗಿ ಮುಂಗಟ್ಟುಗಳು ಎಲ್ಲವೂ ಕ್ಲೋಸ್ ಆಗಿವೆ.
ನಿತ್ಯ ಸಾವಿರಾರು ಗ್ರಾಹರನ್ನು ಆಕರ್ಷಿಸುತ್ತಿದ್ದ ಮಳಿಗೆಗಳು ಇಂದು ಸಂಪೂರ್ಣ ಬಂದ್ ಆಗಿವೆ.ವ್ಯಾಪಾರ ವಹಿವಾಟ ಕಂಪ್ಲೀಟ್ ಬಂದ್ ಆಗಿದೆ.
ಆದರೆ, ರಸ್ತೆಯಲ್ಲಿ ಕೆಲ ವಾಹನ ಓಡಾಟ ಮಾತ್ರ ಇದೆ. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿರುವ ಪೊಲೀಸರು ಬರುವಂತ ವಾಹನಗಳ ತಪಾಸಣೆ ನಡೆಸ್ತಿದ್ದಾರೆ.
ಎಲ್ಲಾ ವಾಹನಗಳ ದಾಖಲಾತಿ ಮತ್ತು ಯಾವ ಕಾರಣಕ್ಕೆ ಹೊರಗೆ ಬಂದ್ರು ಎಂದು ಪ್ರಶ್ನಿಸುತ್ತಿದ್ದಾರೆ.
Kshetra Samachara
08/01/2022 11:36 am