ಬೆಂಗಳೂರು: ಹೊಸ ವರ್ಷ ಬಂದ್ರೆ ಮುಗೀತು.ಬೆಂಗಳೂರಿನ ಎಂಜಿ ರಸ್ತೆ ರಂಗೇ ಬೇರೆ. ಆದರೆ ಈ ಸಲ ಅದಕ್ಕೆ ಚಾನ್ಸೇ ಇಲ್ಲ ಬಿಡಿ. ಒಮಿಕ್ರಾನ್ ನಿಯಂತ್ರಣಕ್ಕಾಗಿಯೇ ಈಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಇಂದು ಸಂಜೆ 6 ಗಂಟೆಯಿಂದಲೇ ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆಗೆ ಬ್ಯಾರಿಕೇಡ್ ಹಾಕಲಾಗುವುದು ಎಂದು ಡಿಸಿಪಿ ಎಂ.ಎನ್.ಅನುಚೇತ್ ಹೇಳಿದ್ದಾರೆ.
ಎಂಜಿ ರಸ್ತೆ ಮತ್ತು ಬ್ರಿಗೇಡ್ ರೋಡ್‌ನ ಬಾರ್-ಪಬ್-ರೆಸ್ಟೋರೆಂಟ್ 10 ಗಂಟೆಗೆ ಬಂದ್ ಆಗುತ್ತವೆ. ಅದಕ್ಕೂ ಮುಂಚೇನೆ ಇಲ್ಲಿ ಟಿಕೆಟ್ ಬುಕ್ ಮಾಡಿದ ಜನಕ್ಕೆ ಮಾತ್ರ ಅವಕಾಶ ಇದೆ. ಟಿಕೆಟ್ ಬುಕ್ ಮಾಡಿದವ್ರು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. ಇಲ್ಲವಾದರೆ ಅವರಿಗೆ ಪ್ರವೇಶ ಇಲ್ಲವೇ ಇಲ್ಲ ಅಂತಲೇ ಡಿಸಿಪಿ ಎಂ.ಎನ್.ಅನುಚೇತ್ ವಿವರಿಸಿದ್ದಾರೆ.
ಇನ್ನೂ ಒಂದು ವೇಳೆ ಪಬ್ ಗಳು-ಬಾರ್‌ಗಳು ಅವಧಿ ಮೀರಿ ಓಪನ್ ಆಗಿದ್ದರೇ ಅಂತವುಗಳ ಮೇಲೆ ನಿರ್ದಾಕ್ಷಿಣ್ಯವಾಗಿಯೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಿಸಿಪಿ ಎಂ.ಎನ್.ಅನುಚೇತ್ ಎಚ್ಚರಿಕೆ ನೀಡಿದ್ದಾರೆ.
Kshetra Samachara
31/12/2021 11:20 am