ವರದಿ - ಗಣೇಶ್ ಹೆಗಡೆ
ಬೆಂಗಳೂರು -ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಇರಲಿದ್ದು, ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ, ಸಿಎಂ ಹೆಚ್ಚಿನ ನಿರ್ಬಂಧನೆ ಘೋಷಣೆ ಮಾಡಿದ್ದಾರೆ. ನೈಟ್ ಕರ್ಫ್ಯೂ ಎಲ್ಲರ ಗಮನಕ್ಕೆ ಬಂದಿರುವ ವಿಚಾರ. ಪೊಲೀಸ್ ಇಲಾಖೆ ನೈಟ್ ಕರ್ಫ್ಯೂ ಬಗ್ಗೆ ಗಮನ ಇಡಲಿದೆ. ಈಗಾಗಲೇ ನಿನ್ನೆ (ಡಿ.27) ಪೊಲೀಸ್ ಕಮೀಷನರ್ ಜೊತೆಯೂ ಚರ್ಚೆ ನಡೆದಿದೆ ಅಂತ ತಿಳಿಸಿದ್ದಾರೆ.
ಹೋಂ ಗಾರ್ಡ್ಸ್, ಮಾರ್ಷಲ್ಗಳ ಬಳಕೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ನಿರ್ದೇಶನದಂತೆ ಎಲ್ಲಾ ಸಿಬ್ಬಂದಿಗಳು ಸಹಕಾರ ನೀಡಲಿದ್ದಾರೆ. ಜನರೇ ಜಾಗೃತಿ ಪಡೆಯಬೇಕಾಗಿದೆ. ಪೊಲೀಸರು, ಅಧಿಕಾರಿಗಳು ಸೂಚನೆ ಕೊಡಬೇಕೆಂದು ಜನರು ಕಾಯಬೇಕಾಗಿಲ್ಲ ಅಂತ ಗೌರವ್ ಗುಪ್ತ ಹೇಳಿದರು.
ನಿತ್ಯ 300 ಸ್ಯಾಂಪಲ್ ಜಿನೋಮಿಕ್ ಸೀಕ್ವೆನ್ಸ್ಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದ ಆಯುಕ್ತರು, 7 ಜನವರಿ ನಂತರದ ನೈಟ್ ಕಪ್ಯೂ ನಿರ್ಧಾರ ನಾವು ಮಾಡುವುದಿಲ್ಲ. ಮುಂದಿನ ಕ್ರಮಗಳ ಬಗ್ಗೆ ಸಿಎಂ, ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಲಿದೆ ಎಂದಿದ್ದಾರೆ. ಇದೇ ವೇಳೆ ಮಕ್ಕಳಿಗೆ ಲಸಿಕೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಲಸಿಕೆ ಎಂಬುದು ಸ್ವಯಂ ಪ್ರೇರಿತವಾಗಿ ಪಡೆಯಬೇಕಾಗಿದೆ. ಜನರಿಗೆ ಒತ್ತಾಯ ಪೂರಕವಾಗಿ ನೀಡಬೇಕಾಗಿದೆ. ಹಲವು ಪೋಷಕರು ಮಕ್ಕಳ ಲಸಿಕೆಗೆ ಬೇಡಿಕೆ ಇಟ್ಟಿದ್ದರು. ಮಕ್ಕಳಿಗೆ ಇರುವ ಲಸಿಕೆ ಲಭ್ಯತೆ ಬಳಸಿಕೊಳ್ಳಿ. 15-18 ನಡುವಿನ ಮಕ್ಕಳ ಅಂಕಿ ಅಂಶ ಕಲೆ ಹಾಕಲಾಗುತ್ತಿದೆ ಅಂತ ಅಭಿಪ್ರಾಯಪಟ್ಟರು.
Kshetra Samachara
28/12/2021 08:49 pm