ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೊಸ ವರ್ಷಾಚರಣೆಗೆ ಗುಂಪು ಸೇರಿದರೆ ಜೋಕೆ!; ʼಕಣ್ಗಾವಲಿರುತ್ತೆʼ ಡಿ.ಸಿ. ಎಚ್ಚರಿಕೆ

ಬೆಂಗಳೂರು: ಬೆಂಗಳೂರು‌ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಜನ ಸೇರುತ್ತಾರೆ. ಸಭೆ, ಸಮಾರಂಭ ಅಥವಾ ಹೊಸ ವರ್ಷ ಆಚರಣೆಗೆ ಎಲ್ಲಿ ಜನರು ಗುಂಪುಗೂಡುತ್ತಾರೆ ಅಲ್ಲಿ ಕಣ್ಗಾವಲಿಡಲು ಜಿಲ್ಲಾಡಳಿತದಿಂದ ತಂಡಗಳು ಇದ್ದೇ ಇರುತ್ತವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

ನಗರದ ಫ್ರೀಡಂ ಪಾರ್ಕ್​ನಲ್ಲಿ ನಡೆದ ಮಿಲಿಟರಿ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಹೊಸ ವರ್ಷಕ್ಕೆ ನಗರದ ಹೊರವಲಯದಲ್ಲಿ ಪಾರ್ಟಿ, ರೆಸಾರ್ಟ್​ಗಳ ಮೇಲೆ ಕಣ್ಗಾವಲು ಇಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗಳಲ್ಲಿ ತಂಡಗಳಿದ್ದು, ಅವರು ಪ್ರತೀ ಸ್ಥಳಕ್ಕೆ ಭೇಟಿ ನೀಡಿ, ತಪಾಸಣೆ ನಡೆಸುವುದು, ನಿಗಾ ವಹಿಸುವ ಕೆಲಸ ಮಾಡಲಾಗುತ್ತಿದೆ.

ಬಿಬಿಎಂಪಿ ಹೊರವ್ಯಾಪ್ತಿಯಲ್ಲಿ 36 ಪಿಹೆಚ್​ಸಿ, 3 ಸಿಹೆಚ್​ಸಿ, 4 ತಾಲೂಕು ಆಸ್ಪತ್ರೆಗಳಿದ್ದು, ಪ್ರತೀ ಆಸ್ಪತ್ರೆ ವ್ಯಾಪ್ತಿಯಲ್ಲಿ ಒಂದೊಂದು ತಂಡ ಕೆಲಸ ಮಾಡುತ್ತಿದೆ. 900 ಗ್ರಾಮಗಳಿದ್ದು, ಪ್ರತೀ ಮನೆಯವರ ಆರೋಗ್ಯ ಸ್ಥಿತಿಗತಿ, ಲಸಿಕೆ ಪೂರೈಕೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

21/12/2021 09:29 pm

Cinque Terre

382

Cinque Terre

0

ಸಂಬಂಧಿತ ಸುದ್ದಿ