ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗೆ ರಾಖಿ ಕಟ್ಟಿ ಮಹಿಳೆಯರ ಸಂಭ್ರಮಾಚರಣೆ

ಯಲಹಂಕ: ಸದಾ ಕಾನೂನು, ಸುವ್ಯವಸ್ಥೆ, ಬಂದೋಬಸ್ತ್ ಅಂತ ಬ್ಯುಸಿ ಇರುತ್ತಿದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಇಂದು ಮಹಿಳೆಯರದ್ದೇ ಸದ್ದುಗದ್ದಲ. ಕಾರಣ ರಾಖಿ ಹಬ್ಬದ ಪ್ರಯುಕ್ತ ಪೊಲೀಸ್ ಠಾಣೆ ಪ್ರವೇಶಿಸಿದ ಐವತ್ತಕ್ಕೂ ಹೆಚ್ಚು ಮಹಿಳೆಯರು ಪೊಲೀಸರನ್ನೇ ಬಂಧಿಗಳು ಎಂಬಂತೆ ಕೂರಿಸಿ ರಾಖಿ ಕಟ್ಟಿದರು.

ಕೆಲವು ಮಹಿಳೆಯರು ರಾಖಿ ಕಟ್ಟಿದ್ರೆ, ಇನ್ನು ಕೆಲವರು ಪೊಲೀಸರ ಹಣೆಗೆ ತಿಲಕ ಇಟ್ಟರು. ಮತ್ತೆ ಕೆಲವರು ಸಿಹಿ ಹಂಚಿದ್ರು. ಯಲಹಂಕ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಾಲಾಜಿ, PSI ಪ್ರಸಾದ್, ಎಎಸ್ಐಗಳು, ಮುಖ್ಯಪೇದೆಗಳು ಸೇರಿದಂತೆ ಪೊಲೀಸ್ ಠಾಣೆಯಲ್ಲಿದ್ದ ಎಲ್ಲಾ ಸಿಬ್ಬಂದಿಗೂ ರಾಖಿ ಕಟ್ಟಿದ ಮಹಿಳೆಯರು ಎಲ್ಲರಿಗೂ ಶುಭಕೋರಿದರು. ಇದೇ ವೇಳೆ ಠಾಣೆಗೆ ಆಗಮಿಸಿದ ಯಲಹಂಕ ಶಾಸಕ ವಿಶ್ವನಾಥ್ ರವರಿಗೂ ಮಹಿಳೆಯರು, ರಾಖಿ ಕಟ್ಟಿ, ತಿಲಕವಿಟ್ಟು ಮಂಗಳಾರತಿ ಬೆಳಗಿದರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.

Edited By :
PublicNext

PublicNext

11/08/2022 04:02 pm

Cinque Terre

22.4 K

Cinque Terre

0

ಸಂಬಂಧಿತ ಸುದ್ದಿ