ಬೆಂಗಳೂರು- ಪಬ್‌ನಲ್ಲಿ ಕಿರುತರೆ ನಟ ಸುನಾಮಿ ಕಿಟ್ಟಿ ಹೊಡೆದಾಟ ನಡೆಸಿದ್ದಾರೆ. ಇನ್ನು ಈ ಪ್ರಕರಣದ ಬಗ್ಗೆ ಈಗ ಕಿರುತೆರೆ ನಟ ಸುನಾಮಿ ಕಿಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ಪಬ್‌ನಲ್ಲಿ ಆಗಿರೋ ಗಲಾಟೆಗೂ ನನಗೂ ಸಂಬಂಧ ಇಲ್ಲ. ಚೇತನ್ ಮತ್ತು ಪ್ರಶಾಂತ ಎಂಬುವವರು ಮಾಡಿರೋ ಗಲಾಟೆಗೆ ನನ್ನ ಹೆಸರು ಹೇಳ್ತಿದ್ದಾರೆ. ಈ ಗಲಾಟೆ ಜು.24ರಂದು ಆಗಿರೋದು. ಆದ್ರೆ ಈಗ ಇದನ್ನ ಸುದ್ದಿ ಮಾಡ್ತಿದ್ದಾರೆ. ಗಲಾಟೆ ಆದಾಗ ನಾನು ಅಲ್ಲಿದ್ದೆ. ಆದ್ದರಿಂದ ನನ್ನ ಮೇಲು ಕಂಪ್ಲೈಂಟ್ ಆಗಿತ್ತು. ನಾನು ಸ್ಟೇಶನ್‌ನಲ್ಲಿ ಜಾಮಿನು ಪಡೆದು ಬಂದಿದ್ದೇನೆ. ಪಬ್‌ನಲ್ಲಿ ನಡೆದ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ದಯವಿಟ್ಟು ಯಾರೂ ನನ್ನ ಹೆಸರನ್ನು ಅಪಪ್ರಚಾರ ಮಾಡಬೇಡಿ ಎಂದು ಸುನಾಮಿ ಕಿಟ್ಟಿ ಸ್ಪಷ್ಟನೆ ನೀಡಿದ್ದಾರೆ.
PublicNext
08/08/2022 02:39 pm