ಬೆಂಗಳೂರು: ಪೊಲೀಸರು ಅಂದ್ರೆ ಸಾರ್ವಜನಿಕರಲ್ಲಿ ಒಂದು ರೀತಿಯ ಭಯದ ವಾತವಾರಣ ಇರುತ್ತದೆ. ಪೊಲೀಸರಿಗೆ ಮಾನವೀಯತೆ ಮಮಕಾರ ಇರಲ್ಲ. ಅವರಿಗೆ ಕೋಪ ಅಹಂಕಾರ ಅಂತೆಲ್ಲಾ ಜನ ಮಾತನಾಡಿಕೊಳ್ಳುತ್ತಾರೆ. ಆದರೆ ಪೊಲೀಸರು ಕೂಡ ಮನುಷ್ಯರೇ ಅವರಿಗೂ ಮಾನವೀಯತೆ ಇರುತ್ತದೆ ಅಂತ ಆಗಾಗ ಕೆಲ ಪೊಲೀಸರು ತಮ್ಮ ಹೃದಯವೈಶಾಲ್ಯ ತೋರುತ್ತಾನೆ ಇರುತ್ತಾರೆ.
ನಿನ್ನೆ ಚಂದ್ರಾ ಲೇಔಟ್‌ನಲ್ಲೂ ಇಂಥಹದ್ದೆ ಒಂದು ಘಟನೆ ನಡೆದಿದ್ದು, ಮಹಿಳಾ ಪಿಎಸ್‌ಐ ಅನಿತಾಲಕ್ಷ್ಮೀ ಮೂರ್ಚೆ ರೋಗಿಯ ಸಹಾಯಕ್ಕೆ ಧಾವಿಸಿ ಮೂರ್ಚೆ ರೋಗಿಯನ್ನ ಸಂತೈಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಚಂದ್ರಾಲೇಔಟ್‌ನಲ್ಲಿ 25 ವರ್ಷದ ಇಮ್ರಾನ್‌ಗೆ ಏಕಾಏಕಿ ಮೂರ್ಚೆ ಬಂದಿದ್ದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಗಸ್ತಿನಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಸ್ಥಳಕ್ಕೆ ತೆರಳಿ ಅಲ್ಲಿಯೇ ಗ್ಯಾರೇಜ್‌ನಲ್ಲಿ ಇದ್ದ ಕಬ್ಬಿಣವನ್ನ ತಂದು ಆತನ ಕೈಗಿಟ್ಟಿದ್ದಾರೆ. ಬಳಿಕ ಆತನನ್ನ ಸ್ಥಳೀಯರ ಸಹಾಯದಿಂದ ಆಸ್ಪತ್ರಗೆ ದಾಖಲಿಸಿದ್ದಾರೆ.
ಇನ್ನೂ ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸಿದ್ದಲ್ಲದೆ ಇಮ್ರಾನ್‌ಗೆ ಕುಡಿತದ ಚಟದಿಂದ ಹೊರಬರುವಂತೆ ಸಹೋದರಿಯಂತೆ ಬುದ್ಧಿ ಕೂಡ ಹೇಳಿದ್ದಾರೆ. ಸದ್ಯ ಅನಿತಾಲಕ್ಷ್ಮೀ ಈ ಸಂತ್ಕಾರ್ಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
06/07/2022 10:48 am