ಬೆಂಗಳೂರು: ಆಗಸ್ಟ್ 15 ಸೋಮವಾರ ರಾಜಧಾನಿ ಬೆಂಗಳೂರು ಖಾಕಿ ಪಡೆಗೆ ದೊಡ್ಡ ಸವಾಲಿನ ದಿನವಾಗಲಿದೆ. ಕಾರಣ ಅಂದು ಐದು ಮಹತ್ವದ ಕಾರ್ಯಕ್ರಮ ಗಳು ಜರುಗಲಿದೆ. ಇದಕ್ಕೆ ಭದ್ರತೆ ಒದಗಿಸೋದೆ ಬೆಂಗಳೂರು ನಗರ ಪೊಲೀಸರಿಗೆ ಸವಾಲಿನ ವಿಷಯ ಆಗಲಿದೆ.
ಮೊದಲನೇದಾಗಿ ಈದ್ಗಾ ಮೈದಾನ ಧ್ವಜಾರೋಹಣ ಕಾರ್ಯಕ್ರಮ. ಇದಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಇರಲಿದೆ. ಇದಾದ ನಂತರ ಕೆಎಸ್ಆರ್ ರೈಲು ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ನಡಿಗೆ ಜರುಗಲಿದೆ. ಸಾವಿರಾರು ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ಆಗಮಿಸಲಿದ್ದು, ಬಿಗಿ ಭದ್ರತೆ ಕೈಗೊಳ್ಳಬೇಕಿದೆ.
ಇದೇ ವೇಳೆ ಕಾರ್ಪೊರೇಷನ್ ವೃತ್ತದಿಂದ ಕಂಠೀರವ ಕ್ರೀಡಾಂಗಣದವರೆಗೆ ಸರ್ಕಾರದ ಕಾರ್ಯಕ್ರಮ ಜರುಗಲಿದೆ. ಅಲ್ಲದೆ ಲಾಲ್ ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಕೂಡಾ ನಡೆಯಲಿದ್ದು ಖಾಕಿ ಪಡೆ ಸವಾಲಿನ ದಿನವಾಗಿದೆ. ಇನ್ನೂ ಸೋಮವಾರ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಗಳಿವೆ. ಹಲವು ಕಾರ್ಯ ಕ್ರಮ, ಜಾಥಾ ನಡೆಯುವ ಹಿನ್ನೆಲೆಯಲ್ಲಿ ಸಾಕಷ್ಟು ಸಂಚಾರ ದಟ್ಟಣೆ ಆಗುವ ಸಂಭವ ಇದೆ.
Kshetra Samachara
12/08/2022 12:11 pm