ಬೆಂಗಳೂರು: ರಾಜ್ಯದಲ್ಲಿ ವಿಕೇಂಡ್ ಕರ್ಫ್ಯೂ ಜಾರಿಯಿಂದಾಗಿ ತನಗೆ ದೊರೆಯುತ್ತಿದ್ದ ಸಾವಿರಾರು ಕೋಟಿಯನ್ನು ಸರ್ಕಾರ ಕಳೆದುಕೊಂಡಿದೆ.
ಹೌದು. ಸಿನಿಮಾ, ಮಾಲ್, ಹೊಟೇಲ್, ಪ್ರವಾಸೋದ್ಯಮಗಳಿಂದ ವಿಕೇಂಡ್ ನಲ್ಲಿ 300-400 ಕೋಟಿಯಷ್ಟು ಆದಾಯ ಬರ್ತಿತ್ತು.
ಆದರೆ, ವಿಕೇಂಡ್ ಕರ್ಫ್ಯೂ ಜಾರಿಯಿಂದಾಗಿ ಈ ಉದ್ಯಮಗಳ ಮೇಲೆ ಹೊಡೆತ ಬಿದ್ದಿದೆ. ಏಕೆಂದ್ರೆ, ವಾರಾಂತ್ಯದಲ್ಲಿ ಅತಿ ಹೆಚ್ಚು ವಹಿವಾಟು ನಡೆಯುವ ಕ್ಷೇತ್ರಗಳು ಇವಾಗಿವೆ. ಇವುಗಳಿಂದ ಸರ್ಕಾರಕ್ಕೆ ತಿಂಗಳಿಗೆ 8 ಸಾವಿರ ಕೋಟಿ ಜಿಎಸ್ ಟಿ ಹಣವನ್ನು ಪಾವತಿಸಲಾಗುತ್ತದೆ!
ವಾರಾಂತ್ಯದ ಕರ್ಫ್ಯೂವಿನಿಂದ ಇದೀಗ ಸಾವಿರ ಕೋಟಿಯಷ್ಟು ಮೊತ್ತದ ಜಿಎಸ್ ಟಿ ಸರ್ಕಾರಕ್ಕೆ ನಷ್ಟವಾಗುತ್ತಿದೆ. ವಿಕೇಂಡ್ ಕರ್ಫ್ಯೂ ಬಗ್ಗೆ ಉದ್ಯಮಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Kshetra Samachara
10/01/2022 02:00 pm