ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕೋಚಿಂಗ್ ಸೆಂಟರ್ ಹಿಂದಿಕ್ಕಿದ ಪೊಲೀಸ್ : ಫೇಲ್ ಆದ ಮಕ್ಕಳು ಪಾಸ್

ಬೆಂಗಳೂರು : ಕ್ಲಾಸ್ ರೂಂನಲ್ಲಿ ಕುಳಿತುಕೊಂಡು ಪಾಠ ಹೇಳಿಸಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಒಂದುಕಡೆಯಾದರೆ ಪೊಲೀಸರು ಕೂಡ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಪೊಲೀಸರು ಫೇಲಾದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಪಾಠ ಮಾಡುತ್ತಿರುವ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು.

ಈಗ ಫೇಲ್ ಆದಂತಹ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಮರು ಪರೀಕ್ಷೆ ಬರೆದು ಪಾಸಾಗಿದ್ದಾರೆ ಇದಕ್ಕೆಲ್ಲಾ ಕಾರಣವಾಗಿದ್ದು ಬಂಡೆಪಾಳ್ಯ ಪೊಲೀಸರು. ಖಾಸಗಿ ಶಾಲೆಗಳು ತಮ್ಮ ಶಾಲೆಯ ವಿದ್ಯಾರ್ಥಿಗಳು ಎಸ್ಎಸ್ ಎಲದ ಸಿ ಪರೀಕ್ಷೆಯಲ್ಲಿ ಫೇಲ್ ಆಗುತ್ತಿದ್ದಂತೆ ಮರು ಪರೀಕ್ಷೆ ಬರೆದು ಪಾಸಾಗಿ ಅಂತ ಹೇಳಿ ಸುಮ್ಮನಾಗಿಬಿಡುತ್ತಾರೆ.

ಆದರೆ ಬಂಡೆಪಾಳ್ಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆದ ರಾಜೇಶ್ ಮತ್ತು ಪೊಲೀಸ್ ಠಾಣೆ ಸಿಬ್ಬಂದಿ ಪರೀಕ್ಷೆಯಲ್ಲಿ ಫೇಲಾದ ಮಕ್ಕಳನ್ನು ಒಟ್ಟುಗೂಡಿಸಿ ತಿಂಗಳುಗಟ್ಟಲೆ ಪಾಠ ಹೇಳಿಕೊಟ್ಟು ಮರು ಪರೀಕ್ಷೆಯಲ್ಲಿ ಪಾಸು ಮಾಡಿದ್ದಾರೆ.

ಪೊಲೀಸರು ವಿದ್ಯಾರ್ಥಿಗಳಿಗೆ ವಾಟ್ಸ್ ಆ್ಯಪ್ ಗ್ರೂಪ್ ಮಾಡಿ ಬೆಳಗ್ಗೆ 6 ಗಂಟೆಗೆ ಎದ್ದು ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಓದುತ್ತಿದ್ದೇನೆಂದು ಅಪ್ಡೇಟ್ ಮಾಡಬೇಕು. ನಂತರ ಬೆಳಗ್ಗೆಯಿಂದ ಸಂಜೆಯವರೆಗೂ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸಸ್ ತೆಗೆದುಕೊಳ್ಳುತ್ತಿದ್ದರು.

ಸ್ಪೆಷಲ್ ಕ್ಲಾಸೆಸ್ ಗಾಗಿ ಪೊಲೀಸರು ಶಿಕ್ಷಕರನ್ನು ನೇಮಿಸಿದ್ದರು. ಶಿಕ್ಷಕರು ಇಡೀ ದಿನ ವಿದ್ಯಾರ್ಥಿಗಳು ತಾವು ಫೇಲ್ ಆಗಿರುವಂತ ವಿಷಯಗಳನ್ನು ಹೇಳಿಕೊಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳು ಈಗ ಎಸ್ ಎಸ್ ಎಲ್ ಸಿ ಮರು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಪೊಲೀಸರ ಈ ಸ್ಪೆಷಲ್ ಕೋಚಿಂಗ್ ನಿಂದ 65 ಮಕ್ಕಳು ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

ಅದೆಷ್ಟೋ ಖಾಸಗಿ ಶಾಲೆಗಳು ಮಕ್ಕಳನ್ನು ಕೈಬಿಟ್ಟಾಗ ಬಂಡೆಪಾಳ್ಯ ಪೊಲೀಸ್ ಸಿಬ್ಬಂದಿ ಫೇಲಾದ ವಿದ್ಯಾರ್ಥಿಗಳಿಗೆ ಧೈರ್ಯ ಪಾಠ ಹೇಳಿಕೊಟ್ಟು ಈಗ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಮಾಡಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

27/07/2022 11:04 pm

Cinque Terre

42.33 K

Cinque Terre

3

ಸಂಬಂಧಿತ ಸುದ್ದಿ