ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಲಯ ವ್ಯಾಪ್ತಿಯ ಶೆಟ್ಟಿಹಳ್ಳಿ ವಾರ್ಡ್ ನಲ್ಲಿ ಪ್ಲಾಸ್ಟಿಕ್ ತಯಾರು ಮಾಡುವ ಸುಭದ್ರ ಎಂಟರ್ ಪ್ರೈಸಸ್ ಕಾರ್ಖಾನೆ ಮೇಲೆ ದಾಳಿ ನಡೆಸಿ ಸುಮಾರು 4,160 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಂಡದಲ್ಲಿ ದಾಸರಹಳ್ಳಿ ವಲಯದ ವಲಯ ಜಂಟಿ ಆಯುಕ್ತರ ಸಮ್ಮುಖದಲ್ಲಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧೀಕ್ಷಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ-ಘನತ್ಯಾಜ್ಯ ಪರಿವೀಕ್ಷಕರು, ಮಾರ್ಷಲ್ ಸೂಪರ್ ವೈಸರ್ ಮತ್ತು ಇನ್ನಿತರ ಸಿಬ್ಬಂದಿ ಭಾಗವಹಿಸಿದ್ದರು. 7 ಆಟೋ ಟಿಪ್ಪರ್‌ಗಳಲ್ಲಿ ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್ ಅನ್ನು ಪರಿಶೀಲಿಸಿ, ಚೂರು ಚೂರು ಮಾಡಿ ದೊಡ್ಡಬಿದರಕಲ್ಲು ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವಿಲೇವಾರಿ ಮಾಡಲು ವಲಯ ಜಂಟಿ ಆಯುಕ್ತರು ಸೂಚನೆ ನೀಡಿದ್ದಾರೆ.
Kshetra Samachara
28/07/2022 08:16 pm