ಬೆಂಗಳೂರು: ಬೆಂಗಳೂರಿನಲ್ಲಿ 24*7 ಹೋಟೆಲ್ ತೆರೆಯುವ ವಿಚಾರವಾಗಿ ಒಂದಷ್ಟು ಗೊಂದಲ ಉಲ್ಬಣವಾಗಿದೆ. ಹೋಟೆಲ್ ಮಾಲೀಕರ ಸಂಘದವರು ಪ್ರೆಸ್ ಮೀಟ್ ಮಾಡಿ ಹೋಟೆಲ್ ತೆರೆಯಲು ಪೊಲೀಸರಿಂದ ಪರ್ಮಿಷನ್ ಕೊಟ್ಟಿದ್ದಾರೆ ಎಂದು ಹೇಳಿದ್ದರು. ಆದ್ರೆ ಇಂದು ಈ ಬಗ್ಗೆ ಕಮಿಷನರ್ ಮಾತನಾಡಿ ಹೋಟೆಲ್ ಸಂಘದಿಂದ ಮನವಿ ಪತ್ರ ಬಂದಿದೆ. ಈಗಲೇ ಯಾವುದನ್ನೂ ನಿರ್ಧಾರ ಮಾಡೋಕೆ ಆಗಲ್ಲ. ಮನವಿ ಬಗ್ಗೆ ಪರಿಶೀಲನೆ ಮಾಡಲಾಗ್ತಿದೆ. ಬಿಬಿಎಂಪಿ ಸೇರಿದಂತೆ ಸಂಬಂಧ ಪಟ್ಟ ಇಲಾಖೆಗೆ ಕಳುಹಿಸಿದ್ದೀವಿ.
ಇಡೀ ರಾತ್ರಿ ಹೋಟೆಲ್ ಓಪನ್ ಬಗ್ಗೆ ಇಲಾಖೆಗಳ ಅಭಿಪ್ರಾಯ ನೋಡ್ಕೊಂಡು ಮುಂದಿನ ತೀರ್ಮಾನ ಮಾಡ್ತೀವಿ ಎಂದು ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ.
PublicNext
22/04/2022 03:56 pm