ರಿಪೋರ್ಟ್- ರಂಜಿತಾಸುನಿಲ್
ಬೆಂಗಳೂರು: ಅರಮನೆ ಮೈದಾನ ಪ್ಯಾಲೇಸ್ ಗ್ರೌಂಡ್ ನಲ್ಲಿ ಇನ್ನರ್ ವೀಲ್ ಡಿಸ್ಟೀಕ್ 319ರ ವತಿಯಿಂದ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.. ಇದೇ ಸಂದರ್ಭದಲ್ಲಿ ಅಧ್ಯಕ್ಷೆ ಶ್ರೀಮತಿ ವಿನುತಾ ಹರೀಶ್ ರವರು ಮಾತನಾಡಿ ತಾಯಿಯಾಗಿ,ತಂಗಿ,ಅಕ್ಕ ಮತ್ತು ಹೆಂಡತಿಯಾಗಿ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಾಳೆ ಮಹಿಳೆ. ಇಂದು ಮಹಿಳೆಯರು ಪುರುಷರಷ್ಟೆ ಸಮಾನವಾಗಿ ವಿಜ್ಞಾನ,ತಂತ್ರಜ್ಞಾನ,ಕ್ರೀಡೆ,ರಾಜಕೀಯ,ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾಳೆ.
ಮಹಿಳೆ ಅಬಲೆಯಲ್ಲ,ಸಬಲೆ ಎಂದು ರೂಪಿಸಲು ಮತ್ತು ಮಹಿಳೆಯರಿಗೆ ಉತ್ತೇಜನ ನೀಡಲು ಇನ್ಸರ್ ವೀಲ್ ಸಹಾಯ ಹಸ್ತ ನೀಡಿದೆ. ಮಹಿಳೆಯರಿಗೆ ಉದ್ಯೋಗ ಅವಕಾಶ,ಸ್ವಯಂ ಉದ್ಯೋಗಕ್ಕೆ ಸಹಕಾರ ಮತ್ತು ಬಾಲಕಿಯರ ಮತ್ತು ಯುವತಿಯರಿಗೆ ಶಿಕ್ಷಣಕ್ಕೆ ಪ್ರೋತ್ಸಾಹ,ಆದ್ಯತೆ ನೀಡಲಾಗಿದೆ.ಗರ್ಭಿರ್ಣಿ ಸ್ತ್ರೀ ಆರೋಗ್ಯ ರಕ್ಷಣೆ,ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಮತ್ತು ಮಕ್ಕಳ ಅಪೌಷ್ಟಿಕತೆ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಟೈಲರಿಂಗ್ ಯಂತ್ರ ವಿತರಣೆ ಮಹಿಳೆಯರು ತಮ್ಮ ಸ್ವಂತ ಕಾಲ ಮೇಲೆ ನಿಲ್ಲಲು ಇನ್ನರ್ ವೀಲ್ ಸಹಕಾರ ನೀಡುತ್ತಿದೆ ಎಂದು ಹೇಳಿದರು.
Kshetra Samachara
11/07/2022 04:42 pm