ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಉಕ್ರೇನ್ ನಲ್ಲಿ ಸಿಲುಕಿದ ಯಲಹಂಕದ ವಿದ್ಯಾರ್ಥಿಗಳು ಆತಂಕದಲ್ಲಿ ಪೋಷಕರು

ಯಲಹಂಕ: ಬೆಂಗಳೂರು ನಗರ ಯಲಹಂಕ ತಾಲೂಕಿನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೆರಳಿ ಉಕ್ರೇನ್ ನಲ್ಲಿ ಯುದ್ಧದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಯಲಹಂಕದ ಅರೆಕ್ಯಾತನಹಳ್ಳಿಯ ಓರ್ವ ಹಾಗು ಯಲಜಂಕದ ಕೆಂಪೇಗೌಡ ವಾರ್ಡ್ ಮಾರುತಿನಗರದ ಮತ್ತೊಬ್ಬ ವೈದ್ಯಕೀಯ ವಿದ್ಯಾರ್ಥಿನಿ ಈಗ ಆತಂಕದಲ್ಲಿದ್ದಾರೆ.

ಬೆಂಗಳೂರಿನ ರಚನಾ, ಚಿತ್ರದುರ್ಗದ ಸುನೇಹಾ ಹಾಗು ಯಲಹಂಕದ ಸ್ವರ್ಣ ಒಂದೇ ಕಾಲೇಜಿನಲ್ಲಿ ಓದುತ್ತಾ ಒಂದೇ ಹಾಸ್ಟೆಲ್ ನಲ್ಲಿ ವಾಸವಿದ್ದರು.ನಾಲ್ಕು ದಿನಗಳ ಹಿಂದೆ ರಚನಾ & ಸುನೇಹಾ ಟಿಕೆಟ್ ಬುಕ್ ಮಾಡಿ ಭಾರತದತ್ತ ತೆರಳಿದ್ದರು. ವಿಮಾನ ಟೇಕಪ್ ಆದ ಕೂಡಲೇ ರಷ್ಯಾ ಉಕ್ರೇನ್ ರಾಜಧಾನಿ ಕೀವ್ ಮೇಲೆ ದಾಳಿ ಮಾಡಿದ ಕೂಡಲೇ ವಿಮಾನದ ಪೈಲೆಟ್ ಪೊಲೆಂಡ್ ಗೆ ವಿಮಾನವನ್ನ ಹಾರಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಪೊಲೆಂಡ್ ನಿಂದ ಇಬ್ಬರು ಭಾರತಕ್ಕೆ ಬರುವ ವಿಶ್ವಾಸ ಇದೆ. ಆದರೆ ಯಲಹಂಕದ ಸ್ವರ್ಣ ತಾವು ಉಳಿದುಕೊಂಡಿರುವ ಹಾಸ್ಟಲ್ ಕ್ಯಾಂಪಸ್ ನಲ್ಲೆ ಸುರಕ್ಷಿತವಾಗಿದ್ದಾರೆ.

ಆದಷ್ಟು ಬೇಗ ಯುದ್ಧ ಭೀತಿ ಕಡಿಮೆಯಾಗಿ ಮಗಳು ಕ್ಷೇಮವಾಗಿ ಬರಲೆಂದು ಪೋಷಕರು ಪ್ರಾರ್ಥಿಸುತ್ತಿದ್ದಾರೆ.

ಈ ಬಗ್ಗೆ ಯಲಹಂಕ ಶಾಸಕರು ಸಹ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ರಾಜ್ಯ ‌& ನಗರದವರು ಸುರಕ್ಷಿತವಾಗಿ ಬರಲು ಸಕಲ ವ್ಯವಸ್ಥೆ ಮಾಡಿಸುವ ಭರವಸೆ ನೀಡಿದ್ದಾರೆ.

Edited By : Shivu K
PublicNext

PublicNext

27/02/2022 10:40 am

Cinque Terre

42.18 K

Cinque Terre

0