ಬೆಂಗಳೂರು: ಬೇವು ಬೆಲ್ಲ ಸವಿಯುತ್ತಾ ಯುಗಾದಿ ಹಬ್ಬವನ್ನ ಆಚರಿಸುವುದಕ್ಕೆ ಬೆಂಗಳೂರು ಮಂದಿ ಸಜ್ಜಾಗಿದ್ದಾರೆ.. ಕಳೆದ 2 ವರ್ಷದಿಂದ ಜನ ಯುಗಾದಿ ಹಬ್ಬದ ಆಚರಣೆ ತಕ್ಕಮಟ್ಟಿಗೆ ಮಾಡಿಕೊಂಡಿದ್ರು, ಆದ್ರೆ ಈಗ ಕೋವಿಡ್ ನಿರ್ಬಂಧಗಳು ಒಂದು ಕಡೆ ಸಡಿಲಿಕೆಯಾಗಿದೆ.. ಮತ್ತೊಂದು ಕಡೆ ಜನಜೀವನ ಯಥಾಸ್ಥಿತಿಗೆ ಬಂದಿದೆ.. ಹೀಗಾಗಿ ಈ ಬಾರಿ ಮಾರುಕಟ್ಟೆ ಜನರಿಂದ ತುಂಬಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದಾರೆ.. ಇನ್ನೂ ಹೂ, ಹಣ್ಣು, ಮಾವಿನ ಎಲೆ, ಬೇವಿನ ಎಲೆ, ಹಲವಾರು ವಸ್ತುಗಳ ಬೆಲೆ ಗಗನಕ್ಕೇರಿದೆ.. ಯಾವ ಬೆಲೆ ಎಷ್ಟಿದೆ ನೀವೆ ನೋಡಿ..
ಹೂವಿನ ದರ ನೋಡುವುದಾದ್ರೆ,
ಕನಂಕಾಬರ - 1 ಕೆಜಿ 600 ರೂ.
1 ಮಾರು 100 ರೂ.
ಒಂದು ಮೊಳ 40 ರೂಪಾಯಿ..
ಮಲ್ಲಿಗೆ - 1 ಕೆ.ಜಿಗೆ 800 ರೂ.
1 ಮಾರು 120 ರೂ.
ಒಂದು ಮೊಳ 50 ರೂ.
ಸೇವಂತಿಗೆ - 1 ಕೆ.ಜಿಗೆ 800 ರೂ.
1 ಮಾರು 120 ರೂ.
ಒಂದು ಮೊಳ 40 ರೂ.
ಇನ್ನು ತರಕಾರಿಗಳ ಬೆಲೆ ನೋಡುವುದಾದ್ರೆ,
ಹುರಳಿಕಾಯಿ ದರ 1 kg ಗೆ 80 ರೂ
ಆಲೂಗಡ್ಡೆ ದರ 1 kg. ಗೆ 60 ರೂ
ಬದನೇಕಾಯಿ ದರ. 1 kg ಗೆ 45 ರೂ
ಮೆಣಸಿನಕಾಯಿ ದರ. 1 kg 160 ರೂ
ಸೌತೆಕಾಯಿ ದರ. 1 kg 40 ರೂ
ನಿಂಬೆಹಣ್ಣು- ದರ , 1 ಹಣ್ಣಿಗೆ 10 ರೂ
ನುಗ್ಗೇಕಾಯಿ ದರ , 5 ಕಾಯಿಗೆ 60 ರೂ
ಮಾವಿನ ಸೊಪ್ಪು ದರ ಒಂದು ಕಟ್ಟಿಗೆ 50 ರಿಂದ 60 ರೂ
ಬೇವಿನ ಸೊಪ್ಪಿನ ಬೆಲೆ 30 ರಿಂದ 40, 50 ರೂ ಆಗಿದೆ..
ಇನ್ನೂ ಬೆಲೆ ಕೈಗೆಟುಕದಂತಿದ್ರೂ, ವರ್ಷಕ್ಕೊಂದು ಬಾರಿ ಬರೋ ಹಬ್ಬವಾದ್ರಿಂದ, ವರ್ಷದ ಮೊದಲ ಹಬ್ಬವಾಗಿರೋದ್ರಿಂದ ಬೆಲೆ ಏರಿಕೆಯ ನಡುವೆಯೂ ಜನರು ತಮಗೆ ಬೇಕಾದದ್ದನ್ನ ಕೊಂಡುಕೊಳ್ತಿದ್ರು.. ಒಟ್ಟಿನಲ್ಲಿ ನಾಳೆಯ ಯುಗಾದಿ ಹಬ್ಬಕ್ಕೆ ಸಿಲಿಕಾನ್ ಸಿಟಿ ಮಂದಿ ಸಜ್ಜಾಗಿದ್ದು, ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ.. ಹಬ್ಬವನ್ನ ಆಚರಿಸಲೆಂದು ದುಬಾರಿಯಾಗಿದ್ರೂ ಹಬ್ಬಕ್ಕೆ ಬೇಕಾಗಿರೋದನ್ನೆಲ್ಲಾ ಕೊಂಡು ನಾಳೆ ಬೇವು-ಬೆಲ್ಲವನ್ನ ಸವಿಯುತ್ತಾ ಹಬ್ಬಕ್ಕೆ ಮತ್ತಷ್ಟು ಮೆರಗು ತರಲಿದ್ದಾರೆ.
ರಂಜಿತಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
01/04/2022 08:41 pm