ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಕಲುಷಿತಗೊಂಡ ಕಾಟಂನಲ್ಲೂರು ಕೆರೆ

ಬೆಂಗಳೂರು : ಕೆರೆಗಳನ್ನು ಸಂರಕ್ಷಣೆ , ಭದ್ರತೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತವೆ. ಆದರೆ ನಗರದಲ್ಲಿರುವ ಅದೆಷ್ಟೋ ಕೆರೆಗಳು ಅಭಿವೃದ್ಧಿ ಕಾಣದೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿವೆ.

ಅಂಥವುಗಳ ಪೈಕಿ ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಮಹದೇವಪುರ ಕ್ಷೇತ್ರದ ದೊಡ್ಡಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟಂನಲ್ಲೂರು ಕೆರೆಯ ಅಭಿವೃದ್ಧಿಯು ಮರೆಮಾಚಿದೆ.

ಹೌದು ಕಾಟಂನಲ್ಲೂರು ಗ್ರಾಮದ ಕೆರೆ ದಶಕಗಳ ಹಿಂದೆ ಇಲ್ಲಿನ ಜನರ ಜೀವಾಳವಾಗಿತ್ತು ಕೃಷಿ , ವ್ಯವಸಾಯಕ್ಕೆ ಈ ಕೆರೆ ನೀರು ಅನುಕೂಲವಾಗಿತ್ತು ಆದರೆ ಬೆಂಗಳೂರು ಬೆಳೆದಂತೆ ಬೆಂಗಳೂರಿನ ಹೊರವಲಯಗಳಲ್ಲೂ ನಗರೀಕರಣದ ಗಾಳಿ ಬೀಸಿ, ಕೃಷಿ ಚಟುವಟಿಕೆಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿವೆ.

ಕೆರೆಗಳ ಅಭಿವೃದ್ಧಿ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಕಾಟಂನಲ್ಲೂರು ಗ್ರಾಮದ ವೈಟ್ ಫೀಲ್ಡ್ ಕಡೆಗೆ ಸಾಗುವ ಮಾರ್ಗ ಮಧ್ಯೆದಲ್ಲಿರುವ ಈ ಕೆರೆ ಸಂಪೂರ್ಣವಾಗಿ ಅಳವಿನಂಚಿನತ್ತ ಸಾಗಿದೆ. ಕೆರೆಯಲ್ಲಿ ನೀರು ತುಂಬಿದರೂ ಸಹಾ ಅಭಿವೃದ್ಧಿ ಕಾಣದೆ ಜಾಡು, ಜೊಂಡಿನಂತಹ ಸೊಪ್ಪುಗಳು ಕೆರೆಯನ್ನು ಆವರಿಸಿಕೊಂಡು ಮತ್ತಷ್ಟು ಮಲೀನಗೊಳಿಸುತ್ತಿದೆ.

ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕೆರೆಯ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

Edited By : Nagesh Gaonkar
PublicNext

PublicNext

09/02/2022 07:52 am

Cinque Terre

34.92 K

Cinque Terre

0

ಸಂಬಂಧಿತ ಸುದ್ದಿ