ಬೆಂಗಳೂರು : ಅಬಕಾರಿ ಇಲಾಖೆಗೆ ಅಲೆದು,ಅಲೆದು ಸುಸ್ತಾದ ಭಾವಿ ಅಬಕಾರಿ ಉಪ ನಿರೀಕ್ಷಕರು.ಅಭ್ಯರ್ಥಿಗಳ ಫೈನಲ್ ಸೆಲೆಕ್ಷನ್ ಲಿಸ್ಟ್ ಬಂದ್ರೂ ಉದ್ಯೋಗ ದೊರಕುವುದು ಮಾತ್ರ ಅಭ್ಯರ್ಥಿಗಳಿಗೆ ಗಗನ ಕುಸುಮವಾಗಿದೆ.ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ನಾಳೆ ಬನ್ನಿ ಎಂದು ವರ್ಷಗಳಿಂದ ಹೇಳುತ್ತಲೇ ಇರುವುದು ಅಬಕಾರಿ ಇಲಾಖೆಯ ಅಧಿಕಾರಿಗಳ ಚೆಲ್ಲಾಟ ಅಭ್ಯರ್ಥಿಗಳಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ.
ಹೌದು 2018 ರಲ್ಲಿ 59 ಅಬಕಾರಿ ಉಪನಿರೀಕ್ಷಕ ಹುದ್ದೆಗಳಿಗೆ ಅರ್ಜಿ ಸರ್ಕಾರ ಅರ್ಜಿ ಆಹ್ವಾನಿಸಿತ್ತು.ಬಳಿಕ ಪರೀಕ್ಷೆ ನಡೆದು 2-03-21 ರಲ್ಲಿ ಅಭ್ಯರ್ಥಿಗಳ ಫೈನಲ್ ಲಿಸ್ಟ್ ಕೂಡಾ ಬಂದಿದೆ. ಅದಾದ ಬಳಿಕ ನೇಮಕಾತಿ ಅಧಿಸೂಚನೆ ಪ್ರಕಟಿಸಲು ಅಬಕಾರಿ ಇಲಾಖೆ ಹಿಂದೇಟು ಹಾಕುತ್ತಿದೆ. ಮೂಲಗಳ ಪ್ರಕಾರ ಗಾರ್ಡ್ ಹುದ್ದೆಯಲ್ಲಿರುವರಿಗೆ ಪ್ರಮೋಷನ್ ಕೊಟ್ಟು ಸಬ್ ಇನ್ಸ್ಪೆಕ್ಟರ್ ಮಾಡಲು ಇಲಾಖೆ ಮುಂದಾಗುತ್ತಿದೆ. ಇಲಾಖೆಯಿಂದಾಗಿ ಹೊಸಬರಿಗೆ ಅನ್ಯಾಯವಾಗುತ್ತಿದೆ. ಎನ್ನುವ ಮಾತುಗಳು ಕೇಳಿ ಬರುತ್ತಿವೆ.
Kshetra Samachara
20/01/2022 05:14 pm