ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೆಟ್ರೋ ಕಾರ್ಡ್ ರೀಚಾರ್ಜ್‌ಗೆ ಸಿಟಿಟಿ ವ್ಯವಸ್ಥೆ

ಬೆಂಗಳೂರು: ಮೆಟ್ರೋ ಸ್ಮಾರ್ಟ್‌ ಕಾರ್ಡ್ ರೀಚಾರ್ಜ್ ಮಾಡಿದ ಬಳಿಕ ಜಮೆಯಾಗಲು ಗಂಟೆಗಟ್ಟಲೇ ಟೈಂ ತೆಗೆದುಕೊಳ್ತಿತ್ತು. ಇದನ್ನು ತಪ್ಪಿಸುವ ಸಂಬಂಧ ನಮ್ಮ ಮೆಟ್ರೋ ಕಾರ್ಡ್ ಟಾಪ್ ಅಪ್ ಟರ್ಮಿನಲ್ ( ಸಿಟಿಟಿ) ವ್ಯವಸ್ಥೆ ಜಾರಿಗೆ ತಂದಿದೆ.

ಮೆಟ್ರೋ ಸ್ಮಾರ್ಟ್ ಕಾರ್ಡ್ ಅನ್ನು ಬೆಂಗಳೂರು ಮೆಟ್ರೋ ನಿಗಮದ ಅಪ್ಲಿಕೇಶನ್ ಅಥವಾ ವೆಬ್ ಸೈಟ್ ಪೋನ್ ಪೇ , ಪೇ ಟಿಎಮ್ ಗಳ ಮೂಲಕ ಯಶಸ್ವಿಯಾಗಿ ರೀಚಾರ್ಜ್ ಮಾಡಿದ ಬಳಿಕ ಮೆಟ್ರೋ ನಿಲ್ದಾಣಗಳಲ್ಲಿ ಮಾಹಿತಿ ಕೇಂದ್ರಗಳ ಬಳಿ ಇರುವ ಸಿಟಿಟಿ ಕೇಂದ್ರದಲ್ಲಿ ಪ್ರಸ್ತುತ ಪಡಿಸಬೇಕು.

ಬಯಸಿದ ಭಾಷೆಯನ್ನು ಬಳಸಿಕೊಂಡು ಅನ್ ಲೈನ್ ಟಾಪ್ ಅಪ್ ಗುಂಡಿ ಒತ್ತ ಬೇಕು.ಬಳಿಕ ಹೌದು ಎಂದು ಧೃಡೀಕರಣಿಸಿದರೆ ರೀಚಾರ್ಜ್ ಮಾಡಿದ ಮೊತ್ತ ಜಮೆ ಅಗಲಿದೆ. ಹಾಗೂ ಕಾರ್ಡ್ ನಲ್ಲಿ ಇರುವ ಬಾಕಿ ಮೊತ್ತ ನವೀಕರಣಗೊಳ್ಳಲಿದೆ.

Edited By : Nagaraj Tulugeri
Kshetra Samachara

Kshetra Samachara

16/12/2021 12:28 pm

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ