ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವರುಣ ಅಬ್ಬರಕ್ಕೆ ಕೆರೆಗಳಾದ ನಗರ ರಸ್ತೆಗಳು!; ಉಕ್ಕಿ ಹರಿಯುತ್ತಿದೆ ನೀರು, ಪ್ರವಾಹ ಭೀತಿ

ಬೆಂಗಳೂರು: ನಗರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ರಸ್ತೆಗಳೆಲ್ಲವೂ ಕೆರೆಗಳಂತಾಗಿವೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಳೆಯಿಂದ ಎಲ್ಲೆಲ್ಲಿ ಏನೇನು ಆಗಿದೆ. ಯಾವ ರಸ್ತೆಯಲ್ಲಿ ಮಳೆ ಬಂದ್ರೆ ನೀರು ಕಟ್ಟಿ ನಿಲ್ಲುತ್ತೆ ಅನ್ನೋದರ ವರದಿ ಇಲ್ಲಿದೆ ನೋಡಿ...

ಕೆಂಗೇರಿಯ ರೈಲ್ವೆ ಟ್ರ್ಯಾಕ್ ರಸ್ತೆಯಲ್ಲಿ‌ ಮೊನ್ನೆ ತಾನೆ ಟಾರ್ ಹಾಕಿದ್ರು. ಆದ್ರೆ, ಈ ನಡುವೆ ನಿರಂತರ ಸುರಿಯುತ್ತಿರುವ ಮಳೆಗೆ ಮತ್ತೆ ಗುಂಡಿಗಳಾಗಿ, ರಸ್ತೆಯಿಡೀ ನೀರು ತುಂಬಿದೆ. ಸರ್ಜಾಪುರ- ಬೆಳ್ಳಂದೂರಿನ ರಸ್ತೆಗಳಲ್ಲಿ ನೀರು ಉಕ್ಕಿ ಹರಿದು ಪ್ರವಾಹದ ಭೀತಿ ಎದುರಾಗಿದೆ.

ಮಾರ್ಕೆಟ್, ಮಹಾಲಕ್ಷ್ಮಿ ಲೇಔಟ್,‌ ಬಾಪೂಜಿ ನಗರ, ಪುಟ್ಟೇನಳ್ಳಿ, ಹೊಸದಾಗಿ ಆಗಿರುವ ಲೇಔಟ್ ಗಳು, ಕೆರೆ ಪಕ್ಕದಲ್ಲಿರುವ ಜಾಗಗಳೆಲ್ಲವೂ ಜಲಾವೃತಗೊಂಡಿವೆ. ಆದರೆ, ವರುಣ ಇಷ್ಟಕ್ಕೇ ತೃಪ್ತಿಗೊಳ್ಳದೆ ಅಬ್ಬರಿಸುತ್ತಲೇ ಇದ್ದಾನೆ.

ವರದಿ: ರಂಜಿತಾ ಸುನಿಲ್ ಪಬ್ಲಿಕ್‌ ನೆಕ್ಸ್ಟ್‌ ಬೆಂಗಳೂರು

Edited By : Nagesh Gaonkar
Kshetra Samachara

Kshetra Samachara

05/09/2022 10:15 pm

Cinque Terre

6.24 K

Cinque Terre

0

ಸಂಬಂಧಿತ ಸುದ್ದಿ