ಬೆಂಗಳೂರು: ನಿನ್ನೆ ಸುರಿದ ಭಾರೀ ಮಳೆಗೆ ಸಿಟಿ ಸಿವಿಲ್ ಕೋರ್ಟ್ ಮೇಯೋ ಹಾಲ್ ನಲ್ಲಿ ಮರ ಬಿದ್ದಿದ್ದು, ಇದುವರೆಗೂ ಯಾವುದೇ ಅರಣ್ಯ ಇಲಾಖೆ ತೆರವಿಗೆ ಮುಂದಾಗಿಲ್ಲ. ನಿನ್ನೆ ಸುರಿದ ಮಳೆಗೆ ಹಡ್ಸನ್ ಸರ್ಕಲ್, ಮಲ್ಲೇಶ್ವರಂ, ಮೋದಿ ಆಸ್ಪತ್ರೆಯ ಹಲವೆಡೆ ಮರಗಳು ಬಿದ್ದಿರುವ ಬಗ್ಗೆ ವರದಿಯಾಗಿದ್ದು, ಬಿಬಿಎಂಪಿ ಮರವನ್ನು ತೆರವುಗೊಳಿಸಿದೆ ಆದರೆ ನ್ಯಾಯಾಲಯದ ಆವರಣದಲ್ಲಿ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಬಿಬಿಎಂಪಿ ಮರೆತಿದೆ.
ಇದು ನಮ್ಮ ಅಡಿಯಲ್ಲಿ ಬರುವುದಿಲ್ಲ ಎಂದು ಬಿಬಿಎಂಪಿ ಸಿಬ್ಬಂದಿ ಹೇಳುತ್ತಾರೆ. ನಾವು ರಸ್ತೆಗಳಲ್ಲಿ ಬಿದ್ದ ಮರಗಳನ್ನು ಮಾತ್ರ ತೆರವುಗೊಳಿಸುತ್ತೇವೆ ಆದರೆ ಕಾಂಪೌಂಡ್ ಒಳಗೆ ಬಿದ್ದ ಮರವನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಲಾಗುವುದು. ಆದರೆ ಮರ ತೆರವು ಮಾಡಲು ನಮ್ಮ ಬಳಿ ಯಾವುದೇ ಸಲಕರಣೆ ಇಲ್ಲ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ. ಇನ್ನಾದರೂ ಇಲಾಖೆ ಆದಷ್ಟು ಬೇಗ ಮರ ತೆರವುಗೊಳಿಸಬೇಕು.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
Kshetra Samachara
19/04/2022 02:25 pm