ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾರ್ವಜನಿಕರಿಗೆ ತಲೆನೋವಾದ ಯೂಸ್ ಲೆಸ್ ನೋ ಪಾರ್ಕಿಂಗ್ ಬೋರ್ಡ್ !

ಬೆಂಗಳೂರು: ನಗರದಲ್ಲಿ ಟೆಂಡರ್ ಶ್ಯೋರ್ ರಸ್ತೆಯಲ್ಲಿ ಪಾರ್ಕಿಂಗ್ ಗೆ ಅಂತ ಪಾಲಿಕೆ ವ್ಯವಸ್ಥೆ ಮಾಡಿದೆ. ಆದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಇದನ್ನು ಪಾರ್ಕಿಂಗ್ ಜಾಗ ಅಂತ ಕನ್ಸೀಡರ್ ಮಾಡೋದೆ ಇಲ್ಲ.

ನಿನ್ನೆ ರಾಜೀವ್ ಎಂಬುವವರು ತಮ್ಮ ಕಾರನ್ನು ಈ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ರು, ಅಲ್ಲೇ ಪಕ್ಕದಲ್ಲಿದ್ದ ನೋ ಪಾರ್ಕಿಂಗ್ ಬೋರ್ಡ್ ಗಮನಿಸಿರಲಿಲ್ಲ. ಬಳಿಕ ಬಂದ ಟ್ರಾಫಿಕ್ ಪೊಲೀಸರು ಅವರ ಜತೆ ಕಿರಿಕ್ ಮಾಡಿದ್ದಾರೆ. ಇಲ್ಲಿ ಪಾರ್ಕಿಂಗ್ ಜಾಗ ಇದ್ದರೂ ಪಾರ್ಕ್ ಮಾಡುವ ಹಾಗಿಲ್ಲ. ಯಾಕಂದ್ರೆ ಈ ಪಾರ್ಕಿಂಗ್ ಜಾಗ ಪಾಲಿಕೆ ನಿರ್ಮಾಣ ಮಾಡಿದೆ. ಆದರೆ, ಇದು ಪಾರ್ಕಿಂಗ್ ಜಾಗ ಎಂಬುದು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ನೋಟಿಫೈ ಆಗಿಲ್ಲ ಎಂದಿದ್ದಾರೆ.

ಬಳಿಕ ಪೊಲೀಸರ‌ನ್ನ ತರಾಟೆಗೆ ತೆಗೆದುಕೊಂಡಾಗ ಖುದ್ದು ಪೊಲೀಸರೇ ಕ್ಷಮೆ ಕೇಳಿ, ಈ ವಿಚಾರ ಪಾಲಿಕೆ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದಿದ್ದಾರೆ. ಈ ಕುರಿತು ರಾಜೀವ್ ಬೆಂಗಳೂರು ಟ್ರಾಫಿಕ್ ಪೊಲೀಸರಿಗರ ಟ್ವೀಟ್ ಮಾಡಿದ್ದಾರೆ. ಅಲ್ಲದೆ ನಗರದ ಬಹುತೇಕ ಕಡೆಗಳಲ್ಲಿ ಇಂತಹ ಯೂಸ್ ಲೆಸ್ ಪಾರ್ಕಿಂಗ್ ಬೋರ್ಡ್ ಗಳು ಸಾರ್ವಜನಿಕರಿಗೆ ತಲೆನೋವಾಗಿದೆ.

Edited By : Manjunath H D
Kshetra Samachara

Kshetra Samachara

25/01/2022 05:05 pm

Cinque Terre

900

Cinque Terre

0

ಸಂಬಂಧಿತ ಸುದ್ದಿ