ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೀಣ್ಯ: ಆಂಬ್ಯುಲೆನ್ಸ್‌ ಯಾಕೆ ನಿಮಗೆ ನಗಣ್ಯ?; ಪೊಲೀಸರಿಗೆ ವಕೀಲ ತರಾಟೆ

ಬೆಂಗಳೂರು: ಪೀಣ್ಯ ಮೇಲ್ಸೇತುವೆ ದುರಸ್ತಿ ಹಿನ್ನೆಲೆಯಲ್ಲಿ NHAI ಒಂದು ವಾರದ ವರೆಗೆ ವಾಹನ ಸಂಚಾರ ಸ್ಥಗಿತ ಮಾಡಲಾಗಿದೆ. ಇದರಿಂದಾಗಿ ತುಮಕೂರು, ಬೆಂಗಳೂರು ಕಡೆಯ ಎರಡೂ ಸರ್ವೀಸ್ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸವಾರರು ಪರದಾಡುವಂತಾಗಿದೆ.

ಇನ್ನು, ಪೀಣ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ದಾಸರಹಳ್ಳಿ ಸಮೀಪದ 8ನೇ ಮೈಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಆಂಬ್ಯುಲೆನ್ಸ್ ಸಾಗಲೂ ಅನುವು ಮಾಡಿಕೊಡದೆ ಟ್ರಾಫಿಕ್ ಪೊಲೀಸರು ನಿಂತಿದ್ದಾರೆ ಎಂದು ಆರೋಪಿಸಿ ವಕೀಲ ಜಗದೀಶ್ ಎಂಬವರು ಟ್ರಾಫಿಕ್ ಪೊಲೀಸರ ವಿರುದ್ಧ ವಾಕ್ಸಮರಕ್ಕಿಳಿದ ಘಟನೆ ನಡೆಯಿತು.

ಸರ್ವೀಸ್ ರಸ್ತೆಯಲ್ಲಿ ಇಷ್ಟು ದೊಡ್ಡ ಟ್ರಾಫಿಕ್ ಜಾಮ್‌ ಆಗಿದ್ರೂ, ಸಿಗ್ನಲ್ ನಲ್ಲಿ ಪೊಲೀಸರು ದಂಡ ವಸೂಲಿಯಲ್ಲೇ ಮಗ್ನರಾಗಿದ್ದೀರಾ ಎಂದು ವಕೀಲರು ತರಾಟೆಗೆತ್ತಿಕೊಂಡು, ಈ ಸಂಬಂಧ ಟ್ರಾಫಿಕ್ ಕಮಿಷನರ್ ರವಿ ಕಾಂತೇಗೌಡ ಅವರಿಗೆ ತಿಳಿಸುವೆ.

ಫ್ಲೈ ಓವರ್ ದುರಸ್ತಿ ಆಗಿದೆ, ಸಾಕಷ್ಟು ಟ್ರಾಫಿಕ್ ಸಮಸ್ಯೆ ಇದೆ. ಆದರೆ, ಆಂಬ್ಯುಲೆನ್ಸ್ ತೆರಳಲು ಅನುವು ಮಾಡಿಕೊಡಿ ಎಂದು ವಾರ್ನ್ ಮಾಡಿಯೇ, ತಮ್ಮ ಕಾರಿನಲ್ಲಿ ಬೆಂಗಳೂರಿನತ್ತ ವಕೀಲ ಜಗದೀಶ್ ಹೊರಟರು.

Edited By : Nagesh Gaonkar
Kshetra Samachara

Kshetra Samachara

29/12/2021 07:51 am

Cinque Terre

1.15 K

Cinque Terre

0

ಸಂಬಂಧಿತ ಸುದ್ದಿ