ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆ ನಿವಾಸಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ಡಾ.ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಸ್ವಾಧೀನಕ್ಕೂ ಮುನ್ನ ಮನೆ ಕಟ್ಟಿದ್ದ ನಿವೇಶನದಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ. 2014-18 ರ ಅವಧಿಯಲ್ಲಿ ‌ನಿರ್ಮಿಸಲಾಗಿದ್ದ ನಿವೇಶನಗಳಿಗೆ ಅಕ್ರಮ- ಸಕ್ರಮ ಭಾಗ್ಯ ದೊರೆತಿದೆ. ನಾಲ್ಕು ವಾರದಲ್ಲಿ ಸಕ್ರಮ ಪತ್ರ ನೀಡುವಂತೆ ಬಿಡಿಎಗೆ ಕೋರ್ಟ್ ಸೂಚನೆ ನೀಡಿದೆ. ಹೀಗಾಗಿ ನಿವೇಶನದಾರರು ಈಗ ಫುಲ್ ಖುಷ್ ಆಗಿದ್ದಾರೆ.

ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ನಿವೃತ್ತ ನ್ಯಾಯ ಮೂರ್ತಿ ಚಂದ್ರಶೇಖರ ನೇತೃತ್ವದ ಸಮಿತಿ ಡಾ.ಶಿವರಾಮಕಾರಂತ ಲೇಔಟ್ ‌ಭೂಸ್ವಾಧೀನ ಅಧಿಸೂಚನೆ ಪ್ರಕಟಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ಕೊಟ್ಟ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇಲ್ಲಿವರೆಗೆ 6000 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ 5,700 ಅರ್ಜಿಗಳು ಬಾಕಿ ಇವೆ. ಇದು ಮೊದಲ ಹಂತದಲ್ಲಿ 300 ಮನೆಗಳಿಗೆ ಸಕ್ರಮಗೊಳಿಸಲು ಆದೇಶ ನೀಡಲಾಗಿದೆ. ನಾಲ್ಕು ವಾರದಲ್ಲಿ ಸಕ್ರಮ ಪತ್ರ ನೀಡಲು ಬಿಡಿಎ ಸೂಚನೆ ನೀಡಿದೆ. ಬಡ, ಮಧ್ಯಮ ವರ್ಗದ ಆಸೆ ಕಮರದಂತೆ ಉತ್ತಮ ತೀರ್ಪು ಮೊದಲ ಹಂತದಲ್ಲಿ ಬಂದಿದೆ.

Edited By : Manjunath H D
Kshetra Samachara

Kshetra Samachara

02/12/2021 02:15 pm

Cinque Terre

446

Cinque Terre

0

ಸಂಬಂಧಿತ ಸುದ್ದಿ