ಬೆಂಗಳೂರು: ನಗರದಲ್ಲಿ ಕೆಲವು ದಿನಗಳ ಕಾಲ ಸುರಿದ ಭಾರಿ ಮಳೆಯಿಂದ ಉಂಟಾದ ಅವಾಂತರ ಒಂದೆರಡಲ್ಲ. ಮಳೆಯ ರುದ್ರನರ್ತನಕ್ಕೆ ಹಲವು ಬಡಾವಣೆಗಳು ಜಲಾವೃತಗೊಂಡಿತ್ತು ಮತ್ತು ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
ಹಾಗೇ ಸರ್ಜಾಪುರ ರಸ್ತೆಯ ರೈನ್ ಬೋ ಡ್ರೈವ್ ಲೇಔಟ್ ನಲ್ಲಿರುವ ಸೂಪರ್ ಮಾರ್ಕೆಟ್ ಕೂಡ ಪೂರ್ಣ ಜಲಾವೃತಗೊಂಡಿತ್ತು. ಈಗ ನೀರು ಇಳಿದ ಮೇಲೆ ಮಾಲೀಕರು ಅಂಗಡಿ ಓಪನ್ ಮಾಡಿದಾಗ ಅವರಿಗೆ ಡಬಲ್ ಶಾಕ್ ಕಾದಿತ್ತು. ಏನದು ನೋಡೋಣ...
ಮಳೆನೀರಿನಲ್ಲಿ ಸಂಪೂರ್ಣವಾಗಿ ಜಲಾವೃತ ಗೊಂಡಿದ್ದ ಸೂಪರ್ ಮಾರ್ಕೆಟ್ ಓಪನ್ ಮಾಡಿದಾಗ ಅಂಗಡಿಯಲ್ಲಿ ಶಾರ್ಟ್ ಸರ್ಕಿಟ್ ಆಗಿರುವುದು ಕಂಡು ಬಂತು. ಒಂದು ಕಡೆ ನೀರಿನಿಂದಾಗಿ ಎಲ್ಲಾ ವಸ್ತುಗಳು ಹಾಳಾಗಿ ಹೋಗಿದ್ದರೆ ಇನ್ನೊಂದು ಕಡೆ ಶಾರ್ಟ್ ಸರ್ಕಿಟ್ ಆಗಿ ಅಂಗಡಿಯ ಮೇಲ್ಛಾವಣಿಯಲ್ಲಿ ಇದ್ದ ಸಿಸಿ ಟಿವಿಗಳು ಸುಟ್ಟು ಹೋಗಿದ್ದವು! ಹೀಗೆ ಲಕ್ಷಾಂತರ ಮೌಲ್ಯದ ವಸ್ತುಗಳು ನಾಶಗೊಂಡಿತ್ತು. ಹತಾಶೆಗೊಂಡಿರುವ ಅಂಗಡಿ ಮಾಲೀಕರು, ಸರಕಾರದಿಂದ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
- ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
Kshetra Samachara
21/09/2022 03:00 pm