ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಡಿವಾಳ ಕೆರೆ ಉಕ್ಕಿ ಹರಿಯುತ್ತಿದ್ದು, ಜನರು ರಸ್ತೆ ಮೇಲೆ ಮೀನು ಹಿಡಿಯುತ್ತಿರುವ ದೃಶ್ಯ ಕಂಡುಬಂದವು. ಬಿಟಿಎಂ ಲೇಔಟ್‌ನ ಮಡಿವಾಳ ಕೆರೆಯಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ರಸ್ತೆಗಳ ಮೇಲೆ ಬರುತ್ತಿದೆ.
ಮೀನು ಹಿಡಿಯಲು ಜನರು ರಸ್ತೆ ಮೇಲೆ ಫಿಷಿಂಗ್ ನೆಟ್‌ಗಳನ್ನು ಹಾಕಿ ಮೀನು ಹಿಡಿಯಲು ಮುಂದಾಗುತ್ತಿದ್ದಾರೆ. ಮಡಿವಾಳ ಕೆರೆಯಿಂದ ರಸ್ತೆಗಳ ಮೇಲೆ ಮೀನುಗಳು ಹೋಗದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕೆರೆ ಬದಿಯಲ್ಲಿಯೇ ನೆಟ್ ಅಳವಡಿಸುತ್ತಿದ್ದಾರೆ.
ಕೆರೆ ತುಂಬಿ ಸಿಲ್ಕ್ ಬೋರ್ಡ್‌ನ ಮುಖ್ಯ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ವಾಹನ ಸವಾರರು ನಿಧಾನವಾಗಿಯೇ ಟ್ರಾಫಿಕ್‌ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಹವಮಾನ ಇಲಾಖೆ ಇನ್ನೂ ನಾಲ್ಕು ದಿನ ಬೆಂಗಳೂರಿನಲ್ಲಿ ಮಳೆ ಆಗುವ ಸಾಧ್ಯತೆ ಎಂದು ಮಾಹಿತಿ ನೀಡಿದೆ. ಹೀಗೆ ಮಳೆ ಮುಂದುವರೆದರೆ ಕೆರೆ ಮತ್ತಷ್ಟು ಉಕ್ಕಿ ಹರಿದು ಸಿಲ್ಕ್ ಬೋರ್ಡ್ ರಸ್ತೆ ಜಲಾವೃತಗೊಳ್ಳಬಹುದು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
28/08/2022 05:03 pm