ನೆಲಮಂಗಲ: ಟೋಲ್ ಅವಧಿ ಮುಕ್ತಾಯಗೊಂಡಿದ್ರು ಅಕ್ರಮವಾಗಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದಾರೆಂದು ಕೆಲ ಸಂಘಟನೆ ಪದಾಧಿಕಾರಿಗಳು ರಾ. ಹೆದ್ದಾರಿ 48ರ ತುಮಕೂರು ರಸ್ತೆಯ ಜಾಸ್ ಟೋಲ್ ಬಳಿ ಟೋಲ್ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಇದೇ ಸಮಯದಲ್ಲಿಯೇ ವಕೀಲ ಜಗದೀಶ್ ಮಾತನಾಡಿ, 2001ರಲ್ಲಿ ರಾ.ಹೆದ್ದಾರಿ ನಿರ್ಮಿಸಿದ್ದು,2020 ರಲ್ಲಿ ಅಧಿಕಾರ ಅವಧಿ ಮುಕ್ತಾಯಗೊಂಡಿದೆ. ದೆಹಲಿ ಹೈಕೋರ್ಟ್‌ನಲ್ಲಿ ಅವಧಿ ಮುಂದುವರಿಸುವಂತೆ ಮನವಿ ಸಲ್ಲಿಸಿದ್ದಾರೆ.
ಜನರಿಗೆ ದಿಕ್ಕು ತಪ್ಪಿಸಿ ಟೋಲ್ ಆಡಳಿತ ಮಂಡಳಿ ಹಗಲು ದರೋಡೆ ಮಾಡುತ್ತಿದೆ. ಈ ಬಗ್ಗೆ ರಾಜ್ಯ, ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು ಬೇಸರದ ಸಂಗತಿ. ದೇಶಾದ್ಯಂತ ಕಳಪೆ ರಾ.ಹೆದ್ದಾರಿಯಲ್ಲಿ ಸಂಚರಿಸಿ ವರ್ಷಕ್ಕೆ 2 ಲಕ್ಷ ಜನರು ಮೃತಪಡುತ್ತಿದ್ದಾರೆ. ರಾತ್ರಿ ವೇಳೆ ಯಾವುದೇ ವಾಹನ ಸವಾರರಿಗೆ ಟೋಲ್ ಆಡಳಿತ ಮಂಡಳಿಯಿಂದ ಸುರಕ್ಷತೆಯಿಲ್ಲ.
ಹೆದ್ದಾರಿಗಳು ಖಾಸಗೀಕರಣವಾಗಿದ್ದು, ಜನ್ರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಹೆದ್ದಾರಿ ಖಾಸಗೀಕರಣಕ್ಕೆ ಕಡಿವಾಣ ಹಾಕಬೇಕು. ರಾಜ್ಯಾದ್ಯಂತ 36 ಟೋಲ್‌ಗಳಿದ್ದು ಅವುಗಳನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.
PublicNext
18/06/2022 11:52 am