ಬೆಂಗಳೂರು: ಯಲಹಂಕ ತಾಲೂಕಿನ ದಿಬ್ಬೂರು ಬಳಿ ಇರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಇನ್ವೆನ್ಸಿಯಾ 2022 ಎಂಬ ಬಿಗ್ಗೆಸ್ಟ್ ಮ್ಯೂಸಿಕಲ್ ಫೆಸ್ಟ್ ಕಾರ್ಯಕ್ರಮವನ್ನು ಕಾಲೇಜ್ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಿಂದಾಗಿ ಶುಕ್ರವಾರ ಸಂಜೆ 7ರಿಂದ ರಾತ್ರಿ 10 ಗಂಟೆವರೆಗೂ ಮೂರ್ನಾಲ್ಕು ಕಿ.ಮೀ. ಟ್ರಾಫಿಕ್ ಜಾಮ್ ಆಗಿ ರಸ್ತೆಯಲ್ಲೇ ವಾಹನ ಸವಾರರು ಪರದಾಡುವಂತಾಯಿತು.
ಹೌದು. ಮ್ಯೂಸಿಕಲ್ ಫೆಸ್ಟ್ ಕಾರ್ಯಕ್ರಮದಲ್ಲಿ ನಗರದ 44 ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಈವೆಂಟ್‌ನಲ್ಲಿ ಭಾಗವಹಿಸಲು ಬಂದಿದ್ದರು. ಪ್ರೆಸಿಡೆನ್ಸಿ ಕಾಲೇಜಿನ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಸೇರಿ 21 ಸಾವಿರಕ್ಕೂ ಹೆಚ್ಚು ಜನ ಜಮಾವಣೆಯಾಗಿದ್ದರು. ಪರಿಣಾಮ ರಾಜಾನುಕುಂಟೆಯಿಂದ ದಿಬ್ಬೂರುವರೆಗೂ, ದಿಬ್ಬೂರಿನಿಂದ ಕಾಕೋಳುವರೆಗೂ ನಾಲ್ಕೈದು ಕಿ.ಮೀ. ವಾಹನ ರಸ್ತೆಗಳಲ್ಲಿ ನಿಂತಿದ್ದವು.
ವಾಹನ ಸವಾರರ ಗೋಳು ಕೇಳುವವರಿಲ್ಲದಂತಾಗಿತ್ತು. ಇದರಿಂದ ರಸ್ತೆಗಳಲ್ಲೇ ಸಾವಿರಾರು ವಾಹನ ನಿಂತು ಪ್ರೆಸಿಡೆನ್ಸಿ ಕಾಲೇಜಿನ ಕಾರ್ಯಕ್ರಮದ ಬಗ್ಗೆ ಆಕ್ರೋಶ ವ್ಯಕ್ತವಾಯ್ತು. ಇಂದು (ಶನಿವಾರ) ಕಾಲೇಜ್ ಸುತ್ತಮುತ್ತಲ ಗ್ರಾಮಸ್ಥರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ರಾಜಾನುಕುಂಟೆ ಪೊಲೀಸರು ಸಹ ಟ್ರಾಫಿಕ್ ನಿಯಂತ್ರಣಕ್ಕಾಗಿ ಒದ್ದಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಪ್ರೆಸಿಡೆನ್ಸಿ ಕಾಲೇಜ್ ಸಹ ಜನ, ವಿದ್ಯಾರ್ಥಿಗಳ ನಿಯಂತ್ರಣ ಮಾಡಲಾಗದೆ ಕೈಚೆಲ್ಲಿದ್ದಾರೆ.
ಸುರೇಶ್ ಬಾಬು Public Next ಯಲಹಂಕ.
PublicNext
28/05/2022 04:51 pm