ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಎಂಟಿಸಿ ಬಸ್‌ನ ಉಚಿತ ಪ್ರಯಾಣಕ್ಕೆ ಸಿಲಿಕಾನ್ ಸಿಟಿ ಪುಲ್ ಫಿದಾ..!

ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಜನರಿಗೆ ಬಿಎಂಟಿಸಿ ಉಚಿತವಾಗಿ ಬಸ್ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿತ್ತು.

ಇದನ್ನು ಸಂಪೂರ್ಣವಾಗಿ ಬಳಸಿಕೊಂಡ ಪ್ರಯಾಣಿಕರು ನಗರದೆಲ್ಲಡೆ ಸುತ್ತಾಡಿದ್ದಾರೆ. ನಿನ್ನೆ ಒಂದೇ ದಿನ ಬರೋಬ್ಬರಿ‌ 30 ಲಕ್ಷಕ್ಕೂ ಅಧಿಕ ಮಂದಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. 5 ಸಾವಿರಕ್ಕೂ‌ ಅಧಿಕ ಟ್ರಿಪ್ ಓಡಿಸಲಾಗಿದ್ದು ನಗರದ ಮೆಜೆಸ್ಟಿಕ್, ಕಾರ್ಪೋರೇಷನ್, ಬಸವನಗುಡಿ, ವಿಜಯ ನಗರ, ಶಾಂತಿ ನಗರ, ಕೆ.ಆರ್.ಸರ್ಕಲ್ ಸೇರಿದಂತೆ ಕೇಂದ್ರ ಭಾಗದಲ್ಲಿ ಜನರು ಹೆಚ್ಚಾಗಿ ಓಡಾಡಿದ್ದಾರೆ.

ಅದರಲ್ಲೂ ಲಾಲ್ ಬಾಗ್, ಬಸವನಗುಡಿ ಭಾಗದಲ್ಲಿ ಜನರು ಹೆಚ್ಚಾಗಿ ಸಂಚಾರ ಮಾಡಿದ್ದಾರೆ. ಕಾರಣ ಲಾಲ್ ಬಾಗ್ ಫ್ಲವರ್ ಶೋ ಗೆ ಜನರು ಬಿಎಂಟಿಸಿ ಬಸ್‌ನಲ್ಲಿ ಹೋಗಿ ಬಂದಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

16/08/2022 09:24 pm

Cinque Terre

3.69 K

Cinque Terre

0

ಸಂಬಂಧಿತ ಸುದ್ದಿ