ರಿಪೋರ್ಟ್- ರಂಜಿತಾಸುನಿಲ್..
ಬೆಂಗಳೂರು: BMTCಯಿಂದ ಟಿಕೆಟ್ ರಹಿತ ಪ್ರಯಾಣಿಕರಿಂದ ವಸೂಲಾದ ದಂಡ ಎಷ್ಟು ಗೊತ್ತಾ.? ಹೌದು. ಇದೇ ತಿಂಗಳಲ್ಲಿ ಬರೋಬ್ಬರಿ 3,325 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, 5.13 ಲಕ್ಷ ದಂಡ ವಿಧಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬಿಎಂಟಿಸಿ, ಸಂಸ್ಥೆಯ ಸಾರಿಗೆ ಆದಾಯ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತನಿಖಾ ತಂಡಗಳು ರಚಿಸಿ 27,503 ಟ್ರಿಪ್ ಗಳನ್ನು ತಪಾಸಣೆ ಮಾಡಿ 3,325 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆಹಚ್ಚಿ, ಒಟ್ಟು 4,91,141 ದಂಡ ವಸೂಲಿ ಮಾಡಲಾಗಿದೆ. ಸಂಸ್ಥೆಯ 1,942 ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಿಸಿರೋದಾಗಿ ತಿಳಿಸಿದೆ.
PublicNext
22/07/2022 07:29 pm