ವರದಿ- ಗಣೇಶ್ ಹೆಗಡೆ
ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಮೊಬೈಲ್ ನೆಟ್ ವರ್ಕ್ ಸಮಸ್ಯೆ ಅನುಭವಿಸುತ್ತಿದ್ದೀರಾ..? ಹಾಗಿದ್ರೆ ಸದ್ಯದಲ್ಲೇ ನಿಮಗೆ ಈ ವಿಚಾರದಲ್ಲಿ ಬಿಗ್ ರಿಲೀಫ್ ಸಿಗಲಿದೆ. ಯಾಕಂದ್ರೆ ನಮ್ಮ ಮೆಟ್ರೋ ದೇಶದಲ್ಲೇ ಇದೇ ಮೊದಲ ಬಾರಿಗೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಸೂಚನೆ ಮೇರೆಗೆ 5ಜಿ ನೆಟ್‌ವರ್ಕ್ ಅಳವಡಿಕೆಯನ್ನು ಫೈಲೆಟ್ ಯೋಜನೆ ಆಧಾರದ ಮೇಲೆ ತನ್ನ ಮೆಟ್ರೋ ನಿಲ್ದಾಣದಲ್ಲಿ ಅಳವಡಿಸಿಕೊಂಡಿದೆ.
ಇದು ಸಂಪೂರ್ಣ ಯಶಸ್ವಿಯಾದರೇ ಶೀಘ್ರದಲ್ಲೇ ಮೆಟ್ರೋ ನಿಲ್ದಾಣದಲ್ಲಿ 5ಜಿ ಸೇವೆ ಲಭ್ಯವಾದ್ರೂ ಅಚ್ಚರಿಯಿಲ್ಲ. ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಮೊಬೈಲ್ ನೆಟ್‌ವರ್ಕ್ ವೇಗದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದಾಗಿ ಬಿಎಂಆರ್‌ಸಿಎಲ್ ಟ್ವೀಟ್ ಮಾಡಿದೆ.
ಎಂ.ಜಿ ರಸ್ತೆಯ ಮೆಟ್ರೋ ನಿಲ್ದಾಣ ದಲ್ಲಿ ರಿಲಾಯನ್ಸ್ ಜಿಯೋ 5ಜಿ ನೆಟ್ ವರ್ಕ್ 200 ಮೀಟರ್ ವ್ಯಾಸದಲ್ಲಿ ಲಭ್ಯವಾಗಿರುವಂತೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಈ ನೆಟ್ ವರ್ಕ್ ನಲ್ಲಿ 1.45 ಜಿಬಿಪಿಎಸ್ ಡೌನ್ ಲೋಡ್ ವೇಗ ಹಾಗೂ 65 ಎಂಬಿಪಿಎಸ್ ಅಪ್ ಲೋಡ್ ವೇಗವನ್ನು ಹೊಂದಿದ್ದು, 4G ನೆಟ್ ವರ್ಕ್ ಗಿಂತ 50 ಪಟ್ಟು ವೇಗವನ್ನು ಈ ನೆಟ್ ವರ್ಕ್ ಹೊಂದಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
Kshetra Samachara
22/07/2022 07:14 pm