ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 3 ಸಾವಿರ ರಸ್ತೆ ಗುಂಡಿ ಇನ್ನೂ ಮುಚ್ಚಲು ಬಾಕಿ!; ಮುಖ್ಯ ಆಯುಕ್ತ ಮಾಹಿತಿ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ನಗರದಲ್ಲಿ ಇನ್ನೂ ಸುಮಾರು 3 ಸಾವಿರ ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

ನಮ್ಮ ಯೋಜನೆ ವಿಭಾಗ ಹಾಗೂ ಪೊಲೀಸ್‌ ಇಲಾಖೆ ಸುಮಾರು 6 ಸಾವಿರ ರಸ್ತೆಗುಂಡಿಗಳು ಇವೆ ಎಂದು ವರದಿ ನೀಡಿದ್ದವು. ಅದರಲ್ಲಿ ಇನ್ನೂ ಒಂದೂವರೆ ಸಾವಿರ ಮುಚ್ಚಲಾಗಿಲ್ಲ. ಇದಲ್ಲದೆ, ವಾರ್ಡ್‌ ಮಟ್ಟದಲ್ಲಿ ಸುಮಾರು 3 ಸಾವಿರ ರಸ್ತೆ ಗುಂಡಿಗಳಿದ್ದವು. ಅದರಲ್ಲಿ ಒಂದೂವರೆ ಸಾವಿರ ರಸ್ತೆ ಗುಂಡಿಗಳು ಇನ್ನೂ ಉಳಿದುಕೊಂಡಿವೆ ಎಂದು ಸುದ್ದಿಗಾರರಿಗೆ ಇಂದು ವಿವರ ನೀಡಿದರು.

ಹಳೆಯ ವಾರ್ಡ್‌ ಪ್ರಕಾರವೇ ರಸ್ತೆಗುಂಡಿಗಳನ್ನು ಮುಚ್ಚಲು ಪ್ರತಿ ವಾರ್ಡ್‌ಗೆ 30 ಲಕ್ಷ ರೂ. ಇದೆ. ಇದಲ್ಲದೆ, ಪ್ರಕೃತಿ ವಿಕೋಪ ಪ್ರಕರಣ ಗಳಿಗೆ ಹಣ ವಿನಿಯೋಗವಾಗಲಿದೆ. ಒಟ್ಟಾರೆ ಹಣ ಅಷ್ಟೇ ಇರುತ್ತದೆ. ಬಜೆಟ್‌ನಲ್ಲಿ ಎಷ್ಟು ಘೋಷಿಸಲಾಗಿತ್ತೋ ಅದನ್ನು ಮರು ಹಂಚಿಕೆ ಮಾಡಲಾಗಿದೆ ಅಷ್ಟೇ ಎಂದರು.

Edited By : Shivu K
PublicNext

PublicNext

21/07/2022 11:53 am

Cinque Terre

23.56 K

Cinque Terre

2

ಸಂಬಂಧಿತ ಸುದ್ದಿ