ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಸಿದ್ಧ ಜೋಗ ಜಲಪಾತ ವೀಕ್ಷಣೆಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆ

ವರದಿ- ಗಣೇಶ್ ಹೆಗಡೆ

ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದಿಂದ ವಾರಾಂತ್ಯದ ಬೆಂಗಳೂರು-ಜೋಗ ಜಲಪಾತ ಪ್ಯಾಕೇಜ್‌ ಟೂರ್‌ ಆರಂಭಿಸಿದೆ.

ಶಿವಮೊಗ್ಗ, ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ (ಶುಕ್ರವಾರ ಮತ್ತು ಶನಿವಾರ) ಪ್ರಯಾಣ ಹೊರಡಬಹುದಾಗಿದೆ. ಇದೇ ಶುಕ್ರವಾರದಿಂದ (ಜುಲೈ 22) ಈ ಟೂರ್‌ಗೆ ಚಾಲನೆ ಸಿಗಲಿದೆ.

ಬೆಂಗಳೂರಿನಿಂದ ರಾತ್ರಿ 10:30ಕ್ಕೆ ಹೊರಡುವ ಬಸ್‌, ಬೆಳಿಗ್ಗೆ 5:30ಕ್ಕೆ ಸಾಗರ ತಲುಪುತ್ತದೆ.ಸಾಗರದಿಂದ ರಾತ್ರಿ 10:00ಕ್ಕೆ ಹೊರಟು ಬೆಂಗಳೂರಿಗೆ ಬೆಳಿಗ್ಗೆ 5:00ಕ್ಕೆ ಸೇರುತ್ತದೆ.

ಶುಕ್ರವಾರ ಹಾಗೂ ಶನಿವಾರ ಬೆಂಗಳೂರು-ಜೋಗ ಜಲಪಾತಕ್ಕೆ ಪ್ರಯಾಣಿಸುವ ವಯಸ್ಕರಿಗೆ 2,300 ರೂಪಾಯಿ ಹಾಗೂ ಮಕ್ಕಳಿಗೆ (6 ರಿಂದ 12 ವರ್ಷ) 2,100 ರೂಪಾಯಿ ದರ ನಿಗದಿಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಇನ್ನೂ ಅಲ್ಲಿ ವಸತಿಗೂ ವ್ಯವಸ್ಥೆ ಕಲ್ಪಿಸಲಾಗಿದ್ದು ಸುಸಜ್ಜಿತ ರೂಂ ನ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲ ಹಿನ್ನೆಲೆಯಲ್ಲಿ ಜೋಗ ಜಲಪಾತಕ್ಕೆ ಹೋಗುವವರು ಕೆಎಸ್ಆರ್‌ಟಿಸಿ ಮೊರೆ ಹೋಗಬಹುದು.

Edited By :
PublicNext

PublicNext

19/07/2022 10:40 pm

Cinque Terre

23.88 K

Cinque Terre

1

ಸಂಬಂಧಿತ ಸುದ್ದಿ