ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತೈಲ ಬೆಲೆ ಏರಿಕೆಯಿಂದ ತತ್ತರಿಸಿದ KSRTC; 50 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಪ್ಲಾನ್!

ವರದಿ: ಗೀತಾಂಜಲಿ

ಬೆಂಗಳೂರು: ಡೀಸೆಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ಕೆಎಸ್ಆರ್ಟಿಸಿ ವಿದ್ಯುತ್ ಬಸ್ಗಳತ್ತ ಮುಖ ಮಾಡುತ್ತಿದ್ದು, ಖಾಸಗಿ ಕಂಪನಿಯಿಂದ ಒಪ್ಪಂದ ಮೇರೆಗೆ 50 ಬಸ್‌ಗಳನ್ನು ಪಡೆದುಕೊಳ್ಳಲು ಮುಂದಾಗಿದೆ. 2022ರ ಡಿಸೆಂಬರ್ ತಿಂಗಳಲ್ಲಿ 25 ಬಸ್‌ಗಳು ಮತ್ತು 2023 ರ ಮಾರ್ಚ್‌ನಲ್ಲಿ 25 ಬಸ್‌ಗಳು ವಿದ್ಯುತ್ ಬಸ್‌ಗಳು ಲಭ್ಯವಾಗಲಿದೆ.

2023ರ ಜನವರಿಯಿಂದ ಬೆಂಗಳೂರು ನಗರದಿಂದ ವಿವಿಧ ಭಾಗಗಳಿಗೆ ಕೆಲ ಬಸ್‌ಗಳು ಕಾರ್ಯಾಚರಣೆ ಮಾಡುವ ನಿರೀಕ್ಷೆಯಿದೆ. ಹೈದ್ರಾಬಾದ್ ಮೂಲದ ಒಲೆಕ್ಟ್ರಾ ಕಂಪನಿಯಿಂದ ಹವಾನಿಯಂತ್ರಿತ 50 ಎಲೆಕ್ಟ್ರಿಕ್ ಬಸ್‌ಗಳನ್ನು ಒಪ್ಪಂದದ ಮೇರೆಗೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ.

ಈ ಬಸ್‌ಗಳನ್ನು ಪ್ರತಿ ದಿನ 450 ಕಿ.ಮೀ.ಸಂಚಾರ ಮಾಡಲಿವೆ. ಒಮ್ಮೆ ಚಾರ್ಜಿಂಗ್ ಮಾಡಿದಲ್ಲಿ 250 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿವೆ. ಬಸ್ ಚಾಲಕರನ್ನು ಮತ್ತು ನಿರ್ವಹಣೆಯನ್ನು ಕಂಪನಿಯೇ ಮಾಡಲಿದೆ. ಜತೆಗೆ, ಎಲೆಕ್ಟ್ರಿಕ್ ಚಾರ್ಜಿಂಗ್ ವೆಚ್ಚವನ್ನು ಕಂಪನಿ ಭರಿಸಲಿದೆ. ಆದರೆ, ನಿರ್ವಾಹಕರನ್ನು ಮಾತ್ರ ಕೆಎಸ್ಆರ್ಟಿಸಿ ಒದಗಿಸಲಿದ್ದು, ಪ್ರತಿ ಕಿ.ಮೀ. 55 ರು.ಗಳನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Edited By :
Kshetra Samachara

Kshetra Samachara

19/07/2022 06:52 pm

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ