ವರದಿ-ಗೀತಾಂಜಲಿ
ಬೆಂಗಳೂರು: ನಾಳೆಯಿಂದ ನಿಮ್ಮ ಮನೆಗೆ ಡೆಲಿವರಿ ಆಗುತ್ತೆ ಬೀದಿ ಬದಿಯ ಸ್ಪೆಷಲ್ ಫುಡ್.ಹೈ ಫೈ ಹೋಟೆಲ್ ಗುಣಮಟ್ಟದಂತೆ ನಿಮಗೆ ತಲುಪುತ್ತೆ ಆಹಾರ.ವಿನೂತನ ಪ್ರಯೋಗಕ್ಕೆ ಈಗ ಬಿಬಿಎಂಪಿ ಮುಂದಾಗಿದ್ದು,ಬೀದಿ ಬದಿ ಆಹಾರ ಮಾರಾಟಗಾರರ ವಹಿವಾಟು ಹೆಚ್ಚಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.ಆನ್ ಲೈನ್ ನಲ್ಲಿ ಬೀದಿ ಬದಿ ಆಹಾರ ಮಾರಾಟಕ್ಕೆ ಬಿಬಿಎಂಪಿ ವೇದಿಕೆ ಕಲ್ಪಿಸಿದೆ.ಪ್ರತಿಷ್ಠಿತ ಸ್ವಿಗ್ಗಿ,ಜೊಮೇಟೊ ದಂತಹ ಆನ್ ಲೈನ್ ಡೆಲಿವರಿ ಆ್ಯಪ್‌ಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಸಿದ್ದತೆ ಕೂಡ ನಡೆಸಿದೆ.
ಗುಣಮಟ್ಟದ ಆಹಾರ ಪೊರೈಸಲು ಬೀದಿ ಬದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲು ಮುಂದಾಗಿದ್ದು,ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಡೆ-ನಲ್‌ಮ್)ಅಡಿಯಲ್ಲಿ ತರಬೇತಿ ನೀಡಲು ಸಿದ್ಧತೆ ನಡೆಸಿದೆ.
ಆಹಾರ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳುವ ಬಗ್ಗೆ ತರಬೇತಿ ನೀಡುತ್ತಿದ್ದಾರೆ.ಬಿಬಿಎಂಪಿ ಅಧಿಕಾರಿಗಳಿಂದ ಆಗಸ್ಟ್ 15 ರೊಳಗೆ ಯೋಜನೆ ಪೂರ್ಣಗೊಳಿಸುವ ಭರವಸೆ ಕೂಡ ನೀಡಿದ್ದಾರೆ.ಅದಕ್ಕಾಗಿ ನಗರದಲ್ಲಿ ಬೀದಿ ಆಹಾರ ಮಾರಾಟಗಾರರ ಬಳಿ ಬಿಬಿಎಂಪಿ ಮಾಹಿತಿ ಕಲೆ ಹಾಕಿದೆ.
ನಗರದಲ್ಲಿ 40 ಸಾವಿರ ಬೀದಿ ಬದಿ ಅಹಾರ ಮಾರಾಟಗಾರರಿರುವ ಕುರಿತಂತೆ ಅಂದಾಜು ನಡೆಸಿದೆ.ಇದಕ್ಕಾಗಿ ಬಿಬಿಎಂಪಿಯಿಂದ ಬೀದಿ ಮಾರಾಟಗಾರರಿಗೆ ಸೀಗುವ ಸವಲತ್ತು, ಮಾರಾಟ ವಿಸ್ತರಿಸಲು ಅವಕಾಶ ನೀಡುವುದು. ಸೇರಿದಂತೆ ಬಿಬಿಎಂಪಿಯಿಂದ ಸಾಲವನ್ನೂ ಕೊಡಿಸುವುದು ಹೀಗೆ ನಾನಾ ಪ್ಲ್ಯಾನ್ ಬಿಬಿಎಂಪಿ ಮಾಡಿಕೊಂಡಿದೆ. ಇನ್ನು ಪಾಲಿಕೆ ನಿಗದಿ ಮಾಡಿದ ಬ್ಯಾಂಕ್‌ಗಳಿಂದ 2 ಲಕ್ಷದವರಗೆ ಸಾಲ ನೀಡಲಾಗ್ತದೆ.ಆಹಾರ ಸರಬರಾಜು ಆ್ಯಪ್‌ಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಕೂಡ ಬಿಬಿಎಂಪಿ ಸಹಕಾರ ನೀಡುತ್ತದೆ.
Kshetra Samachara
18/07/2022 05:15 pm