ಬೆಂಗಳೂರು : ಈ ಏರಿಯಾದಲ್ಲಿ ಎಲ್ಲಿನೋಡಿದರಲ್ಲಿ ಬರಿ ಗುಂಡಿಯುಕ್ತ ರಸ್ತೆಗಳೇ ಕಣ್ಣಿಗೆ ರಾಚುತ್ತವೆ. ಏರಿಯಾದಲ್ಲಿ ಮುಖ್ಯರಸ್ತೆ ಕೂಡ ಗುಂಡಿಮಯವಾಗಿದೆ. ಈ ದೃಶ್ಯಗಳು ಕಂಡು ಬಂದಿದ್ದು ಎನ್ ಎಸ್ ಪಾಳ್ಯ ದಲ್ಲಿ.
ಕುವೆಂಪುನಗರದ ಎನ್ ಎಸ್ ಪಾಳ್ಯ ರಸ್ತೆಗಳ ಮೇಲೆ ಓಡಾಡಲು ದಿನನಿತ್ಯ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಮಾಜಿ ಕಾರ್ಪೊರೇಟರ್ ಕೆ ದೇವದಾಸ್ ಅವರ ಮನೆ ಮುಂದೆಯೇ ರಸ್ತೆ ತಗ್ಗು ಗುಂಡಿಗಳಿಂದ ಕೂಡಿದೆ.
ಅಷ್ಟೆ ಅಲ್ಲದೆ ಈ ಏರಿಯಾದ ಯಾವುದೇ ರಸ್ತೆ ನೋಡಿದರೂ ಕೂಡ ಹಳ್ಳಗಳೆ ಕಾಣಸಿಗುತ್ತವೆ. ಇಷ್ಟಾದರೂ ಬಿಬಿಎಂಪಿ ಮಾತ್ರ ಕಂಡು ಕಾಣದಂತೆ ಸುಮ್ಮನಿದೆ.
ಸದ್ಯ ಬಿಬಿಎಂಪಿಯ ದಿವ್ಯ ನಿರ್ಲಕ್ಷಕ್ಕೆ ಏರಿಯಾದ ಜನ ಕಂಗಾಲಾಗಿದ್ದಾರೆ. ಇನ್ನಾದರೂ ಬಿಬಿಎಂಪಿ ಎಚ್ಚೆತ್ತು ಕೂಡಲೇ ರಸ್ತೆಗಳನ್ನು ಸರಿಪಡಿಸುವುದೇ ಎನ್ನುವುದನ್ನು ಕಾದುನೋಡಬೇಕಿದೆ.
PublicNext
14/07/2022 07:43 pm