ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಅಂಗವಿಕಲರಿಗಾಗಿಯೇ ಬರುತ್ತಿದೆ ಬಿಎಂಟಿಸಿ ನೂತನ ಬಸ್ !

ವರದಿ: ಗೀತಾಂಜಲಿ

ಬೆಂಗಳೂರು: ಬಿಎಂಟಿಸಿಯು ಅಂಗವಿಕಲರಿಗಾಗಿ ಹೊಸ ಹೊಸ ಬಸ್‌ಗಳನ್ನು ರೋಡಿಗೆ ಇಳಿಸಲು ಭರ್ಜರಿ ತಯಾರಿ ಮಾಡಿಕೊಳುತ್ತಿದ್ದೆ. ಈಗ ರಸ್ತೆಗಿಳಿಯುತ್ತಿರುವ ಬಿಎಂಟಿಸಿ ವಿನೂತನ ಬಸ್ ವಿಶೇಷವಾಗಿದ್ದು, ಒಟ್ಟು 40 ಸೀಟುಗಳನ್ನು ಹೊಂದಿದೆ.

ಈ ಬಸ್ಸು ಕೇವಲ 90 ನಿಮಿಷ ಬ್ಯಾಟರಿ ಚಾರ್ಜ್ ಮಾಡಿದ್ರೆ ಸಾಕು. 200 ಕೀ.ಮೀ ವ್ಯಾಪ್ತಿಯಲ್ಲಿ ಚಲಿಸುತ್ತೆ. ಈ ಬಸ್‌ನಲ್ಲಿ ಅಂಗವಿಕಲರಿಗಾಗಿಯೇ ವಿಶೇಷ ಬಾಗಿಲಿದ್ದು. ಮಕ್ಕಳಿಗೆ,ಹಿರಿಯನಾಗರಿಕರಿಗೆಂದು ವಿಶೇಷವಾದ ಸೀಟ್ ವ್ಯವಸ್ಥೆಯನ್ನ ಬಸ್ ನಲ್ಲಿ ಮಾಡಲಾಗಿದೆ. ಜೊತೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಸ್‌ನಲ್ಲಿ ಸಿಸಿಟಿವಿ ಕಣ್ಗಾವಲಿರಲಿದೆ.

ಇನ್ನು ಈ ಬಸ್ ರಸ್ತೆಗಿಳಿದ್ರೆ ಸಿಲಿಕಾನ್ ಸಿಟಿಯಲ್ಲಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯಕ್ಕೆ ಕಡಿವಾಣ ಬಿದಂತಾಗುತ್ತೆ. ಎ.ಸಿ. ಬಸ್‌ಗೆ ಹೋಲುವ ಈ ಹೊಸ ಬಸ್‌ನಲ್ಲಿ ಪ್ರಯಾಣಿಕರು ಖುಷಿ..ಖುಷಿಯಾಗಿ ಪ್ರಯಾಣಿಸಬಹುದಾಗಿದೆ.

Edited By :
Kshetra Samachara

Kshetra Samachara

11/07/2022 02:04 pm

Cinque Terre

2.86 K

Cinque Terre

0

ಸಂಬಂಧಿತ ಸುದ್ದಿ