ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದ ಬೆನ್ನಲ್ಲೇ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಾತಾವರಣ ಗರಿಗೆದರಿದೆ. ಹೊಸ ಕಾಯ್ದೆ ಪ್ರಕಾರ 198 ರಿಂದ 243ಕ್ಕೆ ಏರಿದ ಕಾರ್ಪೋರೇಟರ್ ಗಳಿಗೆ ತಕ್ಕಂತೆ ಹೊಸ ಕೌನ್ಸಿಲ್ ಹೌಸ್ ನಿರ್ಮಾಣ ಶುರುವಾಗಿದೆ.
ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಟಚ್ ಕೊಡಲು ಬಿಬಿಎಂಪಿ ಆರಂಭಿಸಿದೆ. ಕಳೆದ ಬಾರಿ 198 ವಾರ್ಡ್ ಇದ್ದ ಬಿಬಿಎಂಪಿ ,ಈ ಬಾರಿ 243 ವಾರ್ಡ್ ಆಗಿ ಹೆಚ್ಚಳವಾಗಿದೆ. ಕೌನ್ಸಿಲ್ ಕಟ್ಟಡಕ್ಕೆ ಹೊಸ ಬ್ಲೂ ಪ್ರಿಂಟ್ ಸಿದ್ಧಪಡಿಸಿರುವ ಪಾಲಿಕೆ, 10 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸ ಮಾಡುತ್ತಿದೆ.
ಇದುವರೆಗೂ ಪಾಲಿಕೆ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಶಾಸಕರು, ಸಂಸದರು ಪರಿಷತ್ ಸದಸ್ಯರನ್ನು ಸೇರಿ ಒಟ್ಟು 270 ಮಂದಿ ಕೂರಲು ಕೌನ್ಸಿಲ್ ಸಭಾಂಗಣದಲ್ಲಿ ಅವಕಾಶವಿತ್ತು. ಈಗ 364 ಕುರ್ಚಿಗಳಿಗೆ ಪಾಲಿಕೆ ನೂತನ ಕೌನ್ಸಿಲ್ ರೆಡಿಯಾಗುತ್ತಿದೆ.
ಪ್ರತಿ ಸದಸ್ಯರ ಆಸನದಲ್ಲಿ ಮೈಕ್ ಅಳವಡಿಕೆ ಜೊತೆಗೆ ಇಡೀ ಸಭಾಂಗಣಕ್ಕೆ ಸೌಂಡ್ ಪ್ರೂಫ್ ಅಕೌಸ್ಟಿಕ್ಸ್ ಅಳವಡಿಸಲಾಗುತ್ತಿದೆ. ಕೌನ್ಸಿಲ್ ಹೌಸ್ ನಲ್ಲಿ ಸಿಸಿ ಕ್ಯಾಮೆರಾ ಕೂಡ ಅಳವಡಿಕೆಯಾಗಲಿದೆ. ಕೌನ್ಸಿಲ್ ಸಭೆ ವೀಕ್ಷಿಸಲು ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಆಗುತ್ತಿದೆ
ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
21/06/2022 08:29 pm