ಬೆಂಗಳೂರು : ದೇವನಹಳ್ಳಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸಿ ಸೌಲಭ್ಯ ಒದಗಿಸಲಾಗಿದೆ. ಆದರೂ ಅಲ್ಲೊಂದು ಇಲ್ಲೊಂದು ಸಮಸ್ಯೆ ಬೆಂಗಳೂರು ಬ್ರಾಂಡ್ ಇಮೇಜ್ ನ್ನು ಡ್ಯಾಮೇಜ್ ಮಾಡ್ತಿವೆ.
ಹೌದು ನಿನ್ನೆ ಬೆಳಗ್ಗೆ 11 ರ ಸುಮಾರಿಗೆ ಸಾವಿರಾರು ಜನ ಪ್ರಯಾಣಿಕರು ಇಮಿಗ್ರೇಷನ್ ನಲ್ಲಿ ಸಿಲುಕಿಕೊಂಡು ಸತತ ಒಂದು ಗಂಟೆಗೂ ಅಧಿಕ ಕಾಲ ಕ್ಯೂನಲ್ಲಿ ನಿಂತು ಪರದಾಡಿದ ಘಟನೆ ನಡೆದಿದೆ.
ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇಮಿಗ್ರೇಷನ್ ಕ್ಲಿಯರೆನ್ಸ್ ಇಲ್ಲದೆ ಪ್ರಯಾಣಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಇಮಿಗ್ರೇಷನ್ ಕ್ಲಿಯರೆನ್ಸ್ ತುಂಬಾನೆ ಮುಖ್ಯ.
ಆದರೆ ಬ್ರಾಂಡ್ ಬೆಂಗಳೂರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲವೊಂದು ಸಮಸ್ಯೆ ತಲೆ ನೋವಾಗಿ ಪರಿಣಮಿಸಿವೆ.
ಏಕಕಾಲಕ್ಕೆ ನೂರಾರು ವಿದೇಶಿ ಪ್ರಯಾಣಿಕರು ಆಗಮಿಸಿದ್ದರಿಂದ ಸ್ವಲ್ಪ ಸಮಸ್ಯೆಯಾಗಿದೆ ಎಂದು ವಿಮಾನ ನಿಲ್ದಾಣದ ಬಲ್ಲ ಮೂಲ ಸ್ಪಷ್ಟಪಡಿಸಿದೆ.
KIAಗೆ ದೊಡ್ಡ ಹೆಸರಿದೆ. ಆದರೆ ಕೆಲವು ವಿದ್ಯಮಾನ ದೇವನಹಳ್ಳಿಯ ನಮ್ಮ ಬೆಂಗಳೂರು ಬ್ರಾಂಡ್ ಗೆ ಕಪ್ಪು ಚುಕ್ಕೆ ರೀತಿ ಇವೆ ಎಂದು ಟ್ವಿಟ್ಟರ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಇಮಿಗ್ರೇಷನ್ ಸಮಸ್ಯೆ ಸಖತ್ತಾಗಿ ಸದ್ದು ಮಾಡ್ತಿದೆ.
SureshBabu Public Next ದೇವನಹಳ್ಳಿ..
PublicNext
23/05/2022 05:37 pm